ನ್ಯೂಸ್

ಪಿಎಂ ಕೇರ್ಸ್​ನ 3,100 ಕೋಟಿ ರೂ. ಕರೊನಾ ಪರಿಹಾರಕ್ಕೆ ಬಳಕೆ

ನವದೆಹಲಿ: ಪಿಎಂ ಕೇಎರ್ಸ್ ನಿಧಿಯಲ್ಲಿ ಸಂಗ್ರಹವಾಗಿರುವ ಹಣದಲ್ಲಿ 3,100 ಕೋಟಿ ರೂಪಾಯಿಯನ್ನು ವೆಂಟಿಲೇಟರ್ ಖರೀದಿ ಹಾಗೂ ವಲಸೆ ಕಾರ್ವಿುಕರ ಕಲ್ಯಾಣಕ್ಕೆ ಬಿಡುಗಡೆ ಮಾಡಲಾಗಿದೆ. ವೆಂಟಿಲೇಟರ್ ಖರೀದಿಗೆ 2,000 ಕೋಟಿ ರೂ., ವಲಸೆ ಕಾರ್ವಿುಕರ ಕಲ್ಯಾಣಕ್ಕೆ 1,000 ಕೋಟಿ ರೂ. ನೀಡಲಾಗುವುದು.

ಭಾರತದಲ್ಲಿ ಕೊರೊನಾ ಔಷಧ ತಯಾರಿಕೆಗೆ ಪ್ರೋತ್ಸಾಹಿಸಲು 100 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಲಾಗಿದೆ. 50,000 ಸ್ವದೇಶಿ ವೆಂಟಿಲೇಟರ್​ಗಳನ್ನು ಖರೀದಿಸಲಾಗುವುದು. ವಲಸಿಗರಿಗೆಂದು ನೀಡಲಾಗುತ್ತಿರುವ ನಿಧಿಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಂಚಲಾಗುವುದು. ರಾಜ್ಯ ಸರ್ಕಾರಗಳು ಆ ಹಣವನ್ನು ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳಿಗೆ ನೀಡಬೇಕು. ಆ ಹಣವನ್ನು ವಲಸಿಗರ ಆಹಾರ, ವಸತಿ, ವೈದ್ಯಕೀಯ ಸೇವೆ ಮತ್ತು ಸ್ಥಳಾಂತರಕ್ಕೆ ಬಳಸಿಕೊಳ್ಳಬೇಕು. ಲಸಿಕೆ ತಯಾರಿಕೆಗೆ ಮೀಸಲಿಡಲಾಗುತ್ತಿರುವ ಹಣವನ್ನು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಖರ್ಚು ಮಾಡಲಾಗುವುದು ಎಂದು ಹೇಳಲಾಗಿದೆ.