ಮೈಸೂರು : ಮೈಸೂರಿನಲ್ಲಿ ಮರಗಳನ್ನು ಉಳಿಸಿ ಎಂಬ ಆಂದೋಲನವು ವೇಗ ಪಡೆದುಕೊಳ್ಳುತ್ತಿದೆ. ಈ ನಡುವೆ ಸರ್ಕಾರ ರಸ್ತೆ ಅಗಲೀಕರಣಕ್ಕಾಗಿ 125 ಮರಗಳನ್ನು ಕಡಿಯುವ ಯೋಜನೆ ರೂಪಿಸಿಕೊಂಡಿದ್ದು, ಇದು ಪರಿಸರ ಕಾರ್ಯಕರ್ತರಿಂದ ಇನ್ನಷ್ಟು ತೀವ್ರ ಟೀಕೆಗೆ ಗುರಿಯಾಗಿದೆ. ಇತ್ತೀಚೆಗೆ ಎಸ್.ಪಿ ಆಫೀಸ್ ಜಂಕ್ಷನ್‌ನಿಂದ ಕಾಳಿಕಾಂಬ ದೇವಸ್ಥಾನದವರೆಗಿನ ಹೈದರ್ ಅಲಿ ರಸ್ತೆಯ ಎರಡೂ ಬದಿಗಳಲ್ಲಿ 40 ಕ್ಕೂ ಹೆಚ್ಚು ಬೃಹತ್ ಮರಗಳನ್ನು ಕಡಿಯಲಾಗಿದೆ.
ಇದೀಗ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ರಸ್ತೆ ಅಗಲೀಕರಣದ ನೆಪದಲ್ಲಿ ಮಾನಂದವಾಡಿ ರಸ್ತೆಯ ಉದ್ದಕ್ಕೂ ಇರುವ 125 ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಈಗಾಗಲೇ ಅರಣ್ಯ ಇಲಾಖೆಯಿಂದ ಅನುಮತಿ ಕೋರಿದೆ. ಆರು ತಿಂಗಳ ಹಿಂದೆಯೇ ಪತ್ರ ಕಳುಹಿಸಲಾಗಿದ್ದು, ಅರಣ್ಯ ಇಲಾಖೆ ಪೂರಕ ದಾಖಲೆಗಳ ಕೊರತೆಯನ್ನು ಉಲ್ಲೇಖಿಸಿ ಯಾವುದೇ ಪ್ರತಿಕ್ರಿಯೆ ನೀಡದೆ ಹಿಂದಿರುಗಿಸಿದೆ.
ಈ ಪ್ರದೇಶದಲ್ಲಿ 150 ಕ್ಕೂ ಹೆಚ್ಚು ಮರಗಳನ್ನು ಪಿಡಬ್ಲ್ಯೂಡಿ ಗುರುತಿಸಿದೆ. ಅವುಗಳಲ್ಲಿ ಹಲವು ಮೂರರಿಂದ ನಾಲ್ಕು ದಶಕಗಳಿಗಿಂತ ಹಳೆಯ ಮರಗಳಾಗಿವೆ. ಆಲದ ಮರ, ಪೀಪಲ್, ಹುಣಸೆ ಮರ, ಬಸುರಿ, ಹಿಪ್ಪೆ, ಇಂಡಿಯನ್ ಕಾರ್ಕ್ ಮರ, ಕಾಪರ್ ಪಾಡ್ ಮತ್ತು ಛತ್ರ' ಮರಗಳು ಇಲ್ಲಿವೆ. ಈ ಮರಗಳು ರಸ್ತೆಯ ಉದ್ದಕ್ಕೂ ಸಾಗುವ ಜನರಿಗೆ ನೆರಳಾಗಿ ನಿಂತಿವೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ವೈದ್ಯರಿಂದ ಗೂಂಡಾಗಿರಿ; 77 ವರ್ಷದ ವೃದ್ಧನಿಗೆ ಮನಬಂದಂತೆ ಥಳಿಸಿದ ಡಾಕ್ಟರ್ | Viral vedeo
ಮೈಸೂರಿನ ಎಸ್‌ಪಿ ಕಚೇರಿ ವೃತ್ತ ಮತ್ತು ಕಾಳಿಕಾಂಬ ದೇವಸ್ಥಾನದ ನಡುವಿನ ಹೈದರ್ ಅಲಿ ರಸ್ತೆಯ ಅಗಲೀಕರಣಕ್ಕೆ ಅನುಕೂಲವಾಗುವಂತೆ ಮೈಸೂರು ಮಹಾನಗರ ಪಾಲಿಕೆಯು (ಏಪ್ರಿಲ್ 13 ) ರಂದು ಸಾಕಷ್ಟು ನೆರಳು ನೀಡಲು ಹೆಸರುವಾಸಿಯಾದ 40 ಬೃಹತ್ ಪೆಲ್ಟೋಫೋರಂ ಜಾತಿಯ ಮರಗಳನ್ನ ಕಡಿದು ಹಾಕಿತು.
ಇನ್ನೂ ರಸ್ತೆ ಅಗಲೀಕರಣಕ್ಕಾಗಿ 40 ಉತ್ತಮ ಮರಗಳನ್ನು ಕಡಿಯುವ ಪ್ರಮುಖ ವಿಷಯದ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಪಡೆಯಲು ಎಂಸಿಸಿ ಅಥವಾ ಅರಣ್ಯ ಇಲಾಖೆ ಯಾವುದೇ ಪ್ರಯತ್ನಗಳನ್ನು ಮಾಡದಿರುವುದು ವಿಷಾದಕರ.
ರಸ್ತೆ ಈಗಾಗಲೇ ಸಾಕಷ್ಟು ಅಗಲವಾಗಿತ್ತು, ಮತ್ತು ಈ ರಸ್ತೆಯಲ್ಲಿ ಸಂಚಾರ ಸರಾಗವಾಗಿ ಸಾಗುತ್ತಿತ್ತು. ಈ ಅಗಲೀಕರಣದ ಅಗತ್ಯವಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದರು.
(ಏಜೆನ್ಸೀಸ್)