ಲಕ್ನೋ: ನಿರಂತರ ಸುರಿದ ಮಳೆಯಿಂದ 20 ಅಡಿ ಆಳಕ್ಕೆ ಕುಸಿದು ಹೋದ ಮುಖ್ಯರಸ್ತೆಯ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಯನ್ನು ಪ್ರತ್ಯಕ್ಷವಾಗಿ ಕಂಡ ಸ್ಥಳೀಯರು ಕೆಲ ಸಮಯ ಒಂದಿಚು ಕದಲ್ಲದೇ ಅಲ್ಲಿಯ ನಿಂತಿದ್ದರು. ಈ ಘಟನೆ ಉತ್ತರಪ್ರದೇಶದ ಲಕ್ನೋದ ವಿಕಾಸ್ ನಗರದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಆಧುನಿಕ ಜ್ಞಾನದೊಂದಿಗೆ ಪ್ರಾಚೀನ ಜ್ಞಾನ ಸಮ್ಮಿಳಿಸಿ ಶಿಕ್ಷಣ ನೀಡುವುದು ಅಗತ್ಯ: ಲೇಖಕಿ ಸಹನಾ ಸಿಂಗ್ ಅಭಿಮತ
ರಸ್ತೆಯ ಮಧ್ಯದಲ್ಲಿರುವ ದೊಡ್ಡ ಗುಂಡಿಗೆ ಕಾರೊಂದು ಸಿಲುಕಿದ್ದು, ಅದರ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಮಳೆಯ ಆರ್ಭಟಕ್ಕೆ ಕುಸಿದ ಬೃಹತ್ ಗುಂಡಿ 30 ಅಡಿ ಅಗಲ ಮತ್ತು 20 ಅಡಿ ಆಳವಿದೆ ಎಂದು ವರದಿಯಾಗಿದೆ. ಸ್ಥಳೀಯರ ಪ್ರಕಾರ, ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಘಟನೆಯ ಹಿನ್ನೆಲೆ ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ, ಕಾರನ್ನು ಮೇಲಕ್ಕೆತ್ತಿದ್ದಾರೆ. ಕುಸಿತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ವರದಿಯಾಗಿಲ್ಲ. ಲೋಕೋಪಯೋಗಿ ಇಲಾಖೆ, ರಸ್ತೆ ಕುಸಿತದ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ. ಮುಂದೆ ನಡೆಯಬಹುದಾದ ಭಾರೀ ಅನಾಹುತಗಳನ್ನು ತಪ್ಪಿಸಲು ಬೃಹತ್ ಗುಂಡಿಗೆ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ, ವಾಹನ ಸವಾರರಿಗೆ ಎಚ್ಚರಿಸಿದ್ದಾರೆ,(ಏಜೆನ್ಸೀಸ್).