More

    ಆಧುನಿಕ ಜ್ಞಾನದೊಂದಿಗೆ ಪ್ರಾಚೀನ ಜ್ಞಾನ ಸಮ್ಮಿಳಿಸಿ ಶಿಕ್ಷಣ ನೀಡುವುದು ಅಗತ್ಯ: ಲೇಖಕಿ ಸಹನಾ ಸಿಂಗ್​ ಅಭಿಮತ

    ಬೆಂಗಳೂರು: ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿಲ್ಲ. ಬೌದ್ಧಿಕ ರಂಗದಲ್ಲಿ ನಮ್ಮ ಮನಸ್ಸುಗಳನ್ನು ವಸಾಹತುಶಾಹಿತ್ವದ ಮನಸ್ಥಿತಿಯಿಂದ ಹೊರತರಬೇಕು. ಆಧುನಿಕ ಜ್ಞಾನದೊಂದಿಗೆ ಪ್ರಾಚಿನ ಜ್ಞಾನವನ್ನು ಸಮ್ಮಿಳಿಸಿ ಭಾರತೀಯ ದೃಷ್ಟಿಕೋನದಿಂದ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಸಂಶೋಧಕಿ, ಲೇಖಕಿ ಸಹನಾ ಸಿಂಗ್​ ಅಭಿಪ್ರಾಯಪಟ್ಟಿದ್ದಾರೆ.

    ದಿ ಮಿಥಿಕ್​ ಸೊಸೈಟಿ ಭಾನುವಾರ ಆಯೋಜಿಸಿದ್ದ ರಾವ್​ ಬಹದ್ದೂರ್​ ಸಿ. ಹಯವದನರಾವ್​ ದತ್ತಿ ಉಪನ್ಯಾಸದಲ್ಲಿ ‘ಭಾರತೀಯ ಶೈಕ್ಷಣಿಕ ಪರಂಪರೆಯ ಘನತೆ’ ವಿಷಯದ ಕುರಿತು ಮಾತನಾಡಿದರು.

    ಭಾಷಾಧ್ಯಯನ ಒಂದು ವಿಜ್ಞಾನವಾಗಿದ್ದು ಶಿಕ್ಷಣದ ಪ್ರಮುಖ ಭಾಗವಾಗಿದೆ. ಭಾಷಾಧ್ಯಯನಕ್ಕೆ ಹಿಂದೆ ಹೆಚ್ಚಿನ ಗಮನ ನೀಡಲಾಗುತ್ತಿತ್ತು. ಶೈಕ್ಷಣಿಕ ಅಧ್ಯಯನದಲ್ಲಿ ವಿವಿಧ ಜ್ಞಾನೋಪಕರಣಗಳಾದ ಶೈಕ್ಷಣಿಕ ಆಟಗಳು, ಕಥೆ ಹೇಳುವಿಕೆ ಮುಂತಾದ ಪದ್ಧತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕವಾಗಿ ತರ್ಕಶಾಸ್ತ್ರವನ್ನು ಬೆಳೆಸಲು ಆದ್ಯತೆ ನೀಡಲಾಗುತ್ತಿತ್ತು ಎಂದರು.

    ಭಾರತೀಯ ಶಿಕ್ಷಣ ಪರಂಪರೆಯು ಜೀವನದಲ್ಲಿ ಶೈಕ್ಷಣಿಕ ಮತ್ತು ಬೌದ್ಧಿಕ ಶಿಸ್ತನ್ನು ಬೆಳಸಲು ಆದ್ಯತೆ ನೀಡಿದೆ. ಪ್ರಾಚಿನ ಕಾಲದ ಶೈಕ್ಷಣಿಕ ಕೇಂದ್ರಗಳಾದ ತಕ್ಷಶಿಲಾ, ವಲ್ಲಭಿ, ಉಜ್ಜಯಿನಿ ಮುಂತಾದವುಗಳು ಈ ಪರಂಪರೆಯಲ್ಲಿ ಹೆಸರುವಾಸಿಯಾದವು. ಅಧ್ಯಯನದ ಜತೆಗೆ ವಿಷಯ ಮನನ ಮಾಡಿಕೊಳ್ಳುವುದು ಕೂಡ ಕಲಿಕೆಯ ಪ್ರಮುಖ ಹಂತ. ಈ ಕಾರಣದಿಂದಲೇ ವೇದಗಳನ್ನು ಅನೇಕ ಶತಮಾನಗಳವರೆಗೆ ಮೌಖಿಕ ಪರಂಪರೆಯ ಮೂಲಕ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಪಸರಿಸಲು ಸಾಧ್ಯವಾಯಿತು ಎಂದರು.

    ದಿ ಮಿಥಿಕ್​ ಸೊಸೈಟಿಯ ಕೋಶಾಧ್ಯಕ್ಷ ಕೆ.ಎನ್​. ಹಿರಿಯಣ್ಣಯ್ಯ, ಗೌರವ ಕಾರ್ಯದರ್ಶಿ ಎಸ್​.ರವಿ, ಉಪಾಧ್ಯಕ್ಷೆ ಡಾ. ವಿ. ಅನುರಾಧ, ಆಡಳಿತ ಮಂಡಳಿಯ ಸದಸ್ಯರಾದ ಎಂ.ಆರ್​. ಪ್ರಸನ್ನ ಕುಮಾರ್​ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts