Road accident :ಕುಡಿದ ಮತ್ತಿನಲ್ಲಿ ಟ್ರಕ್ ಚಾಲಕನೊಬ್ಬ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿ, ಎದುರು ಬಂದಂತಹ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ (ಜುಲೈ18)ರಂದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ರುಖಾಡ್ ಗ್ರಾಮದ ಬಳಿ ನಡೆದಿದೆ.
ಇದನ್ನೂ ಓದಿ:‘ಅವಳು ಸಾಯಲು ಬಯಸಿದ್ದಳು, ಅದಕ್ಕಾಗಿ ನಾನೇ ಕೊಂದೆ’: ಮಾಜಿ ಪ್ರಿಯತಮೆಗೆ ವಿಷ ಕೊಟ್ಟು ಸಾಯಿಸಿದ ಪ್ರಿಯತಮ! Lover
ರಸ್ತೆ ಅಪಘಾತದಲ್ಲಿ ಇಬ್ಬರ ಸಾವು:
ಅಪಘಾತದ ಬಳಿಕ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಂತಕುಮಾರ್ ಹರ್ಡಿಯಾ (55) ಮತ್ತು ರಾಮ್‌ಕಿಶೋರ್ ಬರ್ಮೈಯಾ (50) ಮೃತರು. ಟ್ರಕ್ ಚಾಲಕ ಅಜಿತ್ ಯಾದವ್ನ್ನು ಬಂಧಿಸಲಾಗಿದೆ ಎಂದು ಕುರೈ ಪೊಲೀಸ್ ಠಾಣೆಯ ಉಸ್ತುವಾರಿ ಕೃಪಾಲ್ ಸಿಂಗ್ ಟೆಕಮ್ ತಿಳಿಸಿದ್ದಾರೆ.
ಇದನ್ನೂ ಓದಿ:5 ವರ್ಷವೂ ಸಿದ್ದರಾಮಯ್ಯ ಸಿಎಂ
ಅಪಘಾತದಲ್ಲಿ 9 ಜನರಿಗೆ ಗಾಯ:
ಘಟನೆ ವೇಳೆ ಅನೇಕರಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಆಂಬುಲೆನ್ಸ್ ಸೇವೆಯ ಮೂಲಕ ಅವರನ್ನು ಛಾಪಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಾಗ್ಪುರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.