ಸಾಂದರ್ಭಿಕ ಚಿತ್ರ  
ನ್ಯೂಸ್

ಪೂಂಚ್​ನಲ್ಲಿ ಒಳನುಸುಳುವಿಕೆ ಯತ್ನ; ಓರ್ವ ಭಯೋತ್ಪಾದಕನ ಹತ್ಯೆ

ಶ್ರೀನಗರ: ಜಮ್ಮು-ಖಾಶ್ಮೀರದ ಪೂಂಚ್​​ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ ಮೂಲಕ ಭಾರತಕ್ಕೆ ಒಳನುಸುಳಲು ಯತ್ನಿಸಿದ ಮೂವರು ಭಯೋತ್ಪಾದಕರ ಪೈಕಿ ಓರ್ವನನ್ನು ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ.

ಗಡಿ ನಿಯಂತ್ರಣ ರೇಖೆ ಬಳಿಯ ಶಹಾಪೂರ್ ಬಳಿ ತಡರಾತ್ರಿ 2:15ಕ್ಕೆ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಳನುಸುಳುವಿಕೆ ವಿಫಲಗೊಳಿಸಿದ ಸೇನೆ

ಪೂಂಚ್​ನ ಶಹಾಪೂರ್​ ಬಳಿ ಇರುವ ಗಡಿ ನಿಯಂತ್ರಣ ರೇಖೆಯ ಬಳಿ ತಡರಾತ್ರಿ ಅನುಮಾನಸ್ಪದ ಘಟನೆಗಳು ಕಂಡು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸೇಣಾ ಅಧಿಕಾರಿಗಳು ಒಳನುಸುಳಲು ಯತ್ನಿಸಿದ ಮೂವರು ಭಯೋತ್ಪಾದಕರ ಪೈಕಿ ಓರ್ವನನ್ನು ಹೊಡೆದುರುಳಿಸಿದೆ.

ಇನ್ನಿಬ್ಬರಿಗಾಗಿ ಶೋಧ

ಸೇನಾ ಪಡೆಯೂ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಓರ್ವ ಭಯೋತ್ಪಾದಕ ಗುಂಡೇಟಿಗೆ ಬಲಿಯಾಗಿದ್ದಾನೆ. ಇನ್ನಿಬ್ಬರು ಶಂಕಿತರು ಅರಣ್ಯದೊಳಗೆ ಅಡಗಿ ಕುಳಿತಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆದಿದ್ದು ಶೀಘ್ರವೇ ಅವರನ್ನು ಪತ್ತೆ ಹಚ್ಚಲಾಗುವುದು ಎಂದು ಹಿರಿಯ ಸೇನಾ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.