ಜಪಾನ್: ನದಿಯೊಂದು ಏಕಾಏಕಿ ಗಾಢ ಕೆಂಪು ಬಣ್ಣಕ್ಕೆ ತಿರುಗಿರುವ ಅಚ್ಚರಿಯ ಘಟನೆಯ ಘಟನೆ ಜಪಾನ್ನ ನಗೋ ನಗರದಲ್ಲಿ ನಡೆದಿದೆ.
ಇದನ್ನೂ ಓದಿ: ದೆಹಲಿ ಮೆಟ್ರೋ ಒಳಗೆ ಮದ್ಯ ಕೊಂಡೊಯ್ಯಲು ಮುಕ್ತ ಅವಕಾಶ! ಆದರೆ…
ನದಿಯ ನಿಗೂಢ ರೂಪಾಂತರದ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದು, ಈ ಕುರಿತಾದ ಫೋಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ನೆಟ್ಟಿಗರು ನಾನಾ ರೀತಿಯ ಕಾಮೆಂಟ್ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪೊಲೀಸರು ಹಾಗೂ ಪ್ರಾಕೃತಿಕ ವಿಕೋಪ ಇಲಾಖೆ ಅಧಿಕಾರಿಗಳು ಈ ಕುರಿತು ತನಿಖೆ ಮಾಡಿ ಸತ್ಯಾಂಶವನ್ನು ಬಯಲಿಗೆ ಎಳೆದಿದ್ದಾರೆ.
ನಗರದಲ್ಲಿನ ಖಾಸಗಿ ಬಿಯರ್ ಕಂಪನಿಯ ಜನರು ಸೇವಿಸುವ ಆಹಾರದ ಬಣ್ಣವನ್ನು ಬಿಯರ್ನ್ನು ಶೇಖರಿಸಿಡುವ ಕೂಲಿಂಗ್ ಸಿಸ್ಟಮ್‌ಗಳಲ್ಲಿ ಬಳಸಿತ್ತು. ಇದು ಆಕಸ್ಮಿಕವಾಗಿ ಸೋರಿಕೆಯಾಗಿ ಚರಂಡಿ ಮೂಲಕ ನದಿ ಸೇರಿದ್ದೇ ಈ ಅಚ್ಚರಿಯ ಘಟನೆಗೆ ಕಾರಣವಾಗಿದೆ. ಕಂಪನಿಯು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಣ್ಣದ ಸೋರಿಕೆಯಿಂದಾಗಿ ಜನರು ವಿನಾಕಾರಣ ಗಾಬರಿಯಾಗಿದ್ದಾರೆ. ಉಂಟಾದ ತೊಂದರೆಗೆ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: ದೀಪಾವಳಿಗೆ ಹೌಸ್ಫುಲ್ 5 ಸಿನಿಮಾ ಘೋಷಿಸಿದ ಅಕ್ಷಯ್ ಕುಮಾರ್!
ಅಲ್ಲದೇ, ಕಂಪನಿಯ ಅಧಿಕಾರಿಗಳು ಪ್ರೊಪಿಲೀನ್ ಗ್ಲೈಕಾಲ್ ಎಂಬ ರಾಸಾಯನಿಕ ಬಣ್ಣ ಬದಲಾವಣೆಗೆ ಕಾರಣವಾದ ವಸ್ತುವೆಂದು ಗುರುತಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಇದು ಜನರ ಆರೋಗ್ಯದ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದು, ಈ ಬಣ್ಣ ಸೋರಿಕೆಯಿಂದಾಗಿ ಪರಿಸರಕ್ಕೂ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)