ನ್ಯೂಸ್

BBKS11: 'ಸ್ವರ್ಗ' ನಿವಾಸಿಗಳಿಗೆ 'ನರಕ' ದರ್ಶನ ಮಾಡಿಸಲು ರೆಡಿಯಾದ್ರು ಈ ಸ್ಪರ್ಧಿಗಳು!

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss Kannada season 11) ಮನರಂಜನಾ ಕಾರ್ಯಕ್ರಮ ಇದೀಗ ಹೊಸ ರೂಪ ಪಡೆದುಕೊಂಡಿದ್ದು,​ ಸೀಸನ್ 10ರ ಯಶಸ್ಸಿನ ಬೆನ್ನಲ್ಲೇ ಸೀಸನ್​ 11ರ ಭರ್ಜರಿ ಯಶಸ್ಸಿಗೆ ಬಿಗ್ ತಂಡ ದೊಡ್ಡ ಹೆಜ್ಜೆಯನ್ನೇ ಇಟ್ಟಿರುವುದು ಇದೀಗ ಮತ್ತಷ್ಟು ಸ್ಪಷ್ಟವಾಗಿದೆ. ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿರುವ ಕಿಚ್ಚ ಸುದೀಪ್​, ಎಂದಿನಂತೆ ತಮ್ಮ ಖಡಕ್​ ಮಾತಿನ ಶೈಲಿಯಲ್ಲೇ ಗ್ರ್ಯಾಂಡ್​ ಓಪನಿಂಗ್​ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು, 17 ಘಟಾನುಘಟಿ ಸ್ಪರ್ಧಿಗಳು ಬಿಗ್ ಮನೆಗೆ ಸ್ವಾಗತಿಸಿದ್ದಾರೆ. ಸೀಸನ್​ 11ರ (BBKS11) ಮನೆಯೊಳಗೆ ಅದ್ಧೂರಿಯಾಗಿ ಎಂಟ್ರಿಕೊಟ್ಟ ಸ್ಪರ್ಧಿಗಳ ಪೈಕಿ ಕೆಲವರ ಮುಖದಲ್ಲಿ ಮಂದಹಾಸ ಮೂಡಿದರೆ, ಇನ್ನು ಕೆಲವರಲ್ಲಿ ಬೇಸರ ಕಾಡಲಾರಂಭಿಸಿದೆ. ಅದಕ್ಕೆ ಕಾರಣವೂ ಇದೆ.

ಎಂಟ್ರಿಕೊಟ್ಟ 17 ಬಿಗ್​ ಸ್ಪರ್ಧಿಗಳು

ಧನರಾಜ್​ ಆಚಾರ್​, ಗೌತಮಿ ಜಾಧವ್​, ಲಾಯರ್​ ಜಗದೀಶ್​, ತ್ರಿವಿಕ್ರಮ್​, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್​, ಐಶ್ವರ್ಯಾ ಶಿಂಧೋಗಿ, ಅನುಷಾ ರೈ, ಶಿಶಿರ್​ ಶಾಸ್ತ್ರಿ, ಗೋಲ್ಡ್​ ಸುರೇಶ್​, ಮಾನಸ ಸಂತೋಷ್​, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ಉಗ್ರಂ ಮಂಜು, ಧರ್ಮ ಕೀರ್ತಿರಾಜ್​ ಮತ್ತು ರಂಜಿತ್.

ಸ್ವರ್ಗ ಸೇರಿದ ಸ್ಪರ್ಧಿಗಳು: ಧನರಾಜ್​ ಆಚಾರ್​, ಗೌತಮಿ ಜಾಧವ್​, ಲಾಯರ್​ ಜಗದೀಶ್​, ತ್ರಿವಿಕ್ರಮ್​, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್​, ಐಶ್ವರ್ಯಾ ಶಿಂಧೋಗಿ ಮತ್ತು ಉಗ್ರಂ ಮಂಜು.

ನರಕಕ್ಕೆ ಹೋದ ಸ್ಪರ್ಧಿಗಳು: ಅನುಷಾ ರೈ, ಶಿಶಿರ್​ ಶಾಸ್ತ್ರಿ, ಗೋಲ್ಡ್​ ಸುರೇಶ್​, ಮಾನಸಾ ಸಂತೋಷ್​, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಮತ್ತು ರಂಜಿತ್​.

ಕಿಚ್ಚು ಹೆಚ್ಚು

ಸದ್ಯ ಇವರೆಲ್ಲರ ಪೈಕಿ ಮನೆಯಲ್ಲಿ ಬಹಳ ಸದ್ದು ಮಾಡುವ ಸ್ಪರ್ಧಿಗಳು ಎಂದು ಈಗಾಗಲೇ ವೀಕ್ಷಕರಲ್ಲಿ ಭಾರೀ ಭರವಸೆ ಮೂಡಿಸಿರುವವರು ಚೈತ್ರಾ ಕುಂದಾಪುರ ಮತ್ತು ಲಾಯರ್ ಜಗದೀಶ್​. ಅಸಲಿಗೆ ಈ ಇಬ್ಬರು ರೆಬೆಲ್​ ಸ್ಪರ್ಧಿಗಳಾಗಿ, ಎದುರು-ಬದುರು ಆಡುತ್ತಿರುವುದೇ ವೀಕ್ಷಕರಿಗೆ ಅಸಲಿ ಆಟ ಈಗ ಶುರು ಎಂಬ ಪದವನ್ನು ಪದೇ ಪದೇ ನೆನಪಿಸುವಂತಿದೆ. ಒಂದೇ ಸೂರಿನಡಿ ಇವರಿಬ್ಬರು ಪೈಪೋಟಿಗೆ ಇಳಿದರೆ, ಅಲ್ಲಿ ಗತ್ತು-ಗಮ್ಮತ್ತು ಕಾಣಿಸುವುದಿಲ್ಲ ಎಂಬುದು ಹಲವರಿಗೆ ತಿಳಿದಿದೆ. ಹೀಗಾಗಿ ಮುಂಬರುವ ಟಾಸ್ಕ್​ನಲ್ಲಿ ಚೈತ್ರಾ-ಜಗದೀಶ್ ನಡುವಿನ​ ಮಾತಿನ ಜ್ವಾಲೆ ಸ್ಫೋಟಗೊಳ್ಳುವುದರಲ್ಲಿ ಕಿಂಚಿತ್ತು ಅನುಮಾನವೇ ಇಲ್ಲ ಎಂಬುದು ಸದ್ಯ ವೀಕ್ಷಕರಿಗೆ ತಿಳಿದಿರುವ ಸಂಗತಿ. ಚೈತ್ರಾ ಜತೆ ಗೋಲ್ಡ್​ ಸುರೇಶ್​ ಕೂಡ ಧ್ವನಿ ಏರಿಸುವ ನಿರೀಕ್ಷೆಗಳು ಹೆಚ್ಚಿದ್ದು, ಬಿಗ್​ಬಾಸ್​ ಕೊಡುವ ಮೊದಲ ಟಾಸ್ಕ್ ಯಾವುದಾಗಿರಲಿದೆ ಎಂಬುದನ್ನು ಸದ್ಯ ಮುಂಬರುವ ಸಂಚಿಕೆಯಲ್ಲಿ ಕಾದು ತಿಳಿಯಬೇಕಿದೆ.