ನ್ಯೂಸ್

ಬಿಟ್ರನ್​ ಸಂಸತ್​ನಲ್ಲಿ ನರೇಂದ್ರ ಮೋದಿಯನ್ನು ಸಮರ್ಥಿಸಿಕೊಂಡ ರಿಷಿ ಸುನಕ್​!

ಲಂಡನ್​: ಬಿಟ್ರನ್​ ಸಂಸತ್​ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಪ್ರಧಾನಿ ರಿಷಿ ಸುನಕ್​ ಸಮರ್ಥಿಸಿಕೊಂಡಿದ್ದಾರೆ.

2002ರ ಗುಜರಾತ್​ ಕೋಮುಗಲಭೆಯಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಪ್ರಶ್ನಿಸಿ ಬಿಬಿಸಿಯಲ್ಲಿ ಇತ್ತೀಚಿಗೆ ಸಾಕ್ಷ್ಯಚಿತ್ರ ಪ್ರಸಾರವಾಗಿತ್ತು. ಗುರುವಾರ ಬ್ರಿಟನ್​ ಸಂಸತ್​ನಲ್ಲಿ ಈ ಬಗ್ಗೆ ಪಾಕ್​ ಮೂಲದ ಮೂಲದ ಬ್ರಿಟನ್ ಸಂಸದ ಇಮ್ರಾನ್ ಹುಸೇನ್ ಪ್ರಸ್ತಾಪಿಸಿದರು. 2002ರಲ್ಲಿ ಗುಜರಾತ್​ನಲ್ಲಿ ನಡೆದ ಗಲಭೆಯಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡರು. ಆ ವೇಳೆ ನರೇಂದ್ರ ಮೋದಿ ಅವರು ಗುಜರಾತ್​ನ ಸಿಎಂ ಆಗಿದ್ದರು. ಅವರೇ ಈ ಹಿಂಸಾಚಾರಕ್ಕೆ ನೇರ ಹೊಣೆಗಾರರು. ಮೃತರ ಕುಟುಂಬಕ್ಕೆ ನ್ಯಾಯಸಿಕ್ಕಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಿಷಿ ಸುನಕ್​, ನಾವು ಎಲ್ಲಿಯೂ ಕಿರುಕುಳ, ಹಿಂಸಾಚಾರವನ್ನ ಸಹಿಸುವುದಿಲ್ಲ. ಈ ಬಗ್ಗೆ ಯುಕೆ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಆದರೆ ಮೋದಿ ಅವರು ಪಾತ್ರದ ಬಗ್ಗೆ ಖಚಿತತೆ ಇಲ್ಲ ಎಂದರು.

ಇನ್ನು ಬಿಬಿಸಿ ಪ್ರಸಾರ ಮಾಡಿದ ಸಾಕ್ಷ್ಯಚಿತ್ರವನ್ನ ಭಾರತ ಮೂಲದ ಬ್ರಿಟನ್​ ನಾಗರಿಕರು ಖಂಡಿಸಿದ್ದಾರೆ. ಕೋಟ್ಯಂತರ ಹಿಂದುಗಳ ಭಾವನೆಗೆ ನೋವುಂಟು ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)