ನವದೆಹಲಿ: ಜಗತ್ತು ಕಂಡ ಅದ್ಭುತ ಕ್ರಿಕೆಟಿಗರಲ್ಲಿ ಒಬ್ಬ ಎಬಿ ಡೆ ವಿಲಿಯರ್ಸ್ ನಿನ್ನೆ ಭಾರತಕ್ಕೆ ಬಂದಿಳಿದಿದ್ದಾರೆ. ಅವರು ಈಗ ಕಾಂತಾರ ಖ್ಯಾತಿಯ ಕರಾವಳಿ ನಟ ರಿಷಭ್ ಶೆಟ್ಟಿಯನ್ನು ಭೇಟಿ ಮಾಡಿದ್ದು ಈಗ ಎಲ್ಲೆಡೆ ಫೋಟೊಗಳು ವೈರಲ್ ಆಗುತ್ತಿವೆ.
ಇಂದು ರಿಷಭ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದು ಅದಕ್ಕೆ ಕ್ಯಾಪ್ಶನ್ ಆಗಿ 'ಇವತ್ತು ರಿಯಲ್ 360 ಯನ್ನು ಭೇಟಿ ಮಾಡಿದೆ!' ಎಂದು ಬರೆದುಕೊಂಡಿದ್ದಾರೆ.
ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು 'ಇಬ್ಬರು ಲೆಜೆಂಡ್ಗಳು', 'ವಾಹ್' ಎಂದೆಲ್ಲಾ ಬರೆದು ಸಂತೋಷ ವ್ಯಕ್ತಪಡಿಸಿದ್ದಾರೆ.