Ashok Gehlot : ಕೇಂದ್ರ ಸರ್ಕಾರದಿಂದ ಅನುದಾನ ಪಡೆದು ಹೊಸ ವೈದ್ಯಕೀಯ ಸಂಸ್ಥೆ ಸ್ಥಾಪನೆ ಮಾಡುವ ಬದಲು ರಾಜಸ್ತಾನದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RUHS) ಮತ್ತು ರಾಜ್ಯ ಕ್ಯಾನ್ಸರ್ ಸಂಸ್ಥೆಯನ್ನು ವಿಲೀನಗೊಳಿಸಿ ಜೈಪುರದಲ್ಲಿ ವೈದ್ಯಕೀಯ ವಿದ್ಯಾಲಯವನ್ನು ಸ್ಥಾಪಿಸಲು ರಾಜಸ್ಥಾನ ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರವಾಗಿ ಟೀಕಿಸಿದ್ದಾರೆ.
ಸರ್ಕಾರದ ಈ ನಿರ್ಧಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಎರಡು ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಮತ್ತು ವೈದ್ಯರು, ವಿದ್ಯಾರ್ಥಿಗಳು ಮತ್ತು ರೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಸರ್ಕಾರವು ಈಗಾಗಲೇ ಸ್ಥಾಪಿತ ಸಂಸ್ಥೆಗಳ ಹೆಸರನ್ನು ಬದಲಾಯಿಸುವ ಬದಲು AIIMS ಮಾದರಿಯಲ್ಲಿ ಹೊಸ ವೈದ್ಯಕೀಯ ಸಂಸ್ಥೆಯನ್ನು ನಿರ್ಮಿಸಬೇಕಾಗಿತ್ತು. ಇದು ಆರೋಗ್ಯ ರಕ್ಷಣಾ ಸಾಮರ್ಥ್ಯವನ್ನು ವಿಸ್ತರಿಸುತ್ತದೆ ಮತ್ತು ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಅವರು ವಾದಿಸಿದರು.
ಇದನ್ನೂ ಓದಿ: ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ, 1,500 ಕೋಟಿ ರೂ ಆರ್ಥಿಕ ನೆರವು| Himachal Pradesh
ರಾಜ್ಯ ಸರ್ಕಾರ ಜೈಪುರದಲ್ಲಿ ಏಮ್ಸ್ ಮಾದರಿಯಲ್ಲಿ ಆರ್‌ಐಎಂಎಸ್ ಆಸ್ಪತ್ರೆಯನ್ನು ನಿರ್ಮಿಸಲು ನಿರ್ಧರಿಸಿದೆ. ಆದರೆ, ಅದರ ಬದಲಿಗೆ ಈಗಾಗಲೇ ನಿರ್ಮಿಸಲಾದ ಆರ್‌ಯುಎಚ್‌ಎಸ್ ಮತ್ತು ರಾಜ್ಯ ಕ್ಯಾನ್ಸರ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಇದು ಈಗಾಗಲೇ ಸ್ಥಾಪಿತವಾಗಿರುವ ಎರಡು ಸಂಸ್ಥೆಗಳ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಇದು ವೈದ್ಯರು ಮತ್ತು ರೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಗೆಹ್ಲೋಟ್ ಪ್ರತಿಕ್ರಿಯಿಸಿದ್ದಾರೆ.
"RUHS ಈಗಾಗಲೇ ಸ್ವಾಯತ್ತತೆ ಪಡೆದ ವಿಶ್ವವಿದ್ಯಾಲಯವಾಗಿದ್ದು, ಕೋವಿಡ್ ಸಮಯದಲ್ಲಿ ಅತ್ಯುತ್ತಮ ಚಿಕಿತ್ಸೆಗಾಗಿ ಪ್ರಪಂಚದಾದ್ಯಂತ ಅದರ ಹೆಸರನ್ನು ಪಡೆದಿದೆ. ಇನ್ನು RUHS ಅನ್ನು RIMS ಮಾಡುವ ಮೂಲಕ, ಈಗಿರುವ ವೈದ್ಯಕೀಯ ಸೀಟುಗಳು ಕೊನೆಗೊಳ್ಳುತ್ತವೆ. ಹಾಗಾಗಿ ಹಳೆಯ ಸಂಸ್ಥೆಯನ್ನು ಮುಚ್ಚುವ ಬದಲಿಗೆ ಬಿಜೆಪಿ ಸರ್ಕಾರವು RIMS ಎಂಬ ಹೊಸ ಸಂಸ್ಥೆಯನ್ನು ನಿರ್ಮಿಸಬೇಕಿತ್ತು ಎಂದರು.
RIMS ರೀತಿಯಲ್ಲಿ ಹೊಸ ಸಂಸ್ಥೇಯನ್ನು ಪ್ರಾರಂಭಿಸಿದ್ದರೆ ಇದರಿಂದ ಹಲವಾರು ಸಾರ್ವಜನಿಕರಿಗೆ ಪ್ರಯೋಜನ ಸಿಗುತ್ತಿತ್ತು. ಅದೇ ರೀತಿಯಲ್ಲಿ ಈಗಿರುವ ಸರ್ಕಾರಕ್ಕೆ ಹೊಸ ಸಾಧನೆಗಳ ದಾಖಲೆಗಳು ಸಿಗುತ್ತಿದ್ದವು.
ಇದನ್ನೂ ಓದಿ: ನೇಪಾಳದಲ್ಲಿ ಭಾರಿ ಪ್ರತಿಭಟನೆ; ಕಠ್ಮಂಡುವಿಗೆ ವಿಮಾನ ಹಾರಾಟ ರದ್ದು ಮಾಡಿದ ಏರ್ ಇಂಡಿಯಾ, ಇಂಡಿಗೋ| Flights
ಡಬಲ್ ಎಂಜಿನ್ ಸರ್ಕಾರ ರಚನೆಯಾದ ನಂತರ, ಕೇಂದ್ರದಿಂದ ರಾಜ್ಯಕ್ಕೆ ಬರುವ ಹಣದಲ್ಲಿ ಯಾವುದೇ ಕೊರತೆ ಇರುವುದಿಲ್ಲ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಹಣವಿಲ್ಲದಿದ್ದರೆ, ಕೇಂದ್ರದಿಂದ ಆರ್‌ಐಎಂಎಸ್‌ಗೆ ವಿಶೇಷ ಅನುದಾನ ಪಡೆದು ಹೊಸ ಸಂಸ್ಥೆಯನ್ನು ನಿರ್ಮಿಸಬಹುದಿತ್ತು. ಅದರ ಬದಲಿಗೆ ಈಗಾಗಲೇ ನಿರ್ಮಿಸಲಾದ ಸಂಸ್ಥೆಗಳ ಹೆಸರನ್ನು ಬದಲಾಯಿಸುತ್ತಿರುವುದು ಸರಿಯಾದ ಅಭ್ಯಾಸವಲ್ಲ ಎಂದು ಹೇಳಿದರು. (ಏಜೆನ್ಸೀಸ್)