ಕೆಲಸದಿಂದ ವಜಾ ಮಾಡಿದ್ದಕ್ಕೆ ಸಲೂನ್‌ ಮಾಲೀಕನ ಮೇಲೆ ಹಲ್ಲೆ Bengaluru salon attack
ನ್ಯೂಸ್

ಕೆಲಸದಿಂದ ತೆಗೆದಿದ್ದಕ್ಕೆ ಸೇಡು; ಸಲೂನ್‌ಗೆ ನುಗ್ಗಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ! | Bengaluru salon attack

ಬೆಂಗಳೂರಿನ ಆವಲಹಳ್ಳಿಯ ಸಲೂನ್‌ವೊಂದರಲ್ಲಿ ಉದ್ಯೋಗಿಯನ್ನು ಕೆಲಸದಿಂದ ತೆಗೆದಿದ್ದಕ್ಕೆ ಕೋಪಗೊಂಡ ಆಕೆಯ ಪತಿ ಹಾಗೂ ಸಹಚರರು ಮಾಲೀಕ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Bengaluru salon assault: ಬೆಂಗಳೂರಿನ ಸಲೂನ್‌ವೊಂದರಲ್ಲಿ ಉದ್ಯೋಗಿಯನ್ನು ಕೆಲಸದಿಂದ ತೆಗೆದ ವಿಚಾರಕ್ಕೆ ಕೋಪಗೊಂಡ ಆಕೆಯ ಪತಿ, ತನ್ನ ಗ್ಯಾಂಗ್‌ ಜತೆ ಸಲೂನ್‌ಗೆ ನುಗ್ಗಿ ಮಾಲೀಕರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ನಗರದ ಆವಲಹಳ್ಳಿಯಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆವಲಹಳ್ಳಿಯ ಸ್ಕಿನ್ ಶೈನ್ ಯೂನಿಸೆಕ್ಸ್ ಸಲೂನ್‌ನಲ್ಲಿ ಮಾರ್ಚ್ 28ರಂದು ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಕೆಲಸದಿಂದ ತೆಗೆದಿದ್ದಕ್ಕೆ ಕೋಪ

ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಷ್ಮಾ ಎಂಬ ಮಹಿಳಾ ಉದ್ಯೋಗಿಯನ್ನು ಮಾಲೀಕ ಮೋಹನ್ ಕುಮಾರ್ ಕೆಲಸದಿಂದ ತೆಗೆದುಹಾಕಿದ್ದರು. ಈ ಸಂಬಂಧ ವಜಾ ಪತ್ರವನ್ನೂ ನೀಡಿದ್ದರು. ಇದರಿಂದ ಕೋಪಗೊಂಡ ಸುಷ್ಮಾ ಅವರ ಪತಿ, 4-5 ಮಂದಿ ಸಹಚರರೊಂದಿಗೆ ಸಲೂನ್‌ಗೆ ನುಗ್ಗಿದ್ದಾನೆ ಎನ್ನಲಾಗಿದೆ.

ಮಾಲೀಕ ದಂಪತಿ ಮೇಲೆ ಹಲ್ಲೆ

ಸಲೂನ್‌ಗೆ ಬಂದ ಗ್ಯಾಂಗ್​ ಮೋಹನ್ ಕುಮಾರ್ ಹಾಗೂ ಅವರ ಪತ್ನಿ ಶ್ರೀಜಾ ಅವರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಇಡೀ ಘಟನೆ ಸಲೂನ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ವಯಸ್ಸಾಗುವುದಕ್ಕೂ ಕರುಳಿನ ಆರೋಗ್ಯಕ್ಕೂ ಏನು ಸಂಬಂಧ? ಈ 7 ವಿಚಾರಗಳು ಗೊತ್ತಿರಲಿ | Gut health

ಆರೋಪಿಗಳಿಗಾಗಿ ಹುಡುಕಾಟ

ಘಟನೆಗೆ ಸಂಬಂಧಿಸಿದಂತೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಹುಡುಕಾಟ ಮುಂದುವರಿಸಿದ್ದಾರೆ.