ನ್ಯೂಸ್

ಇದನ್ನೆಲ್ಲ ಓದಬೇಡಿ ಬಿಟ್ಟಾಕಿ! ಚಿತ್ರ ಪ್ರಿಯರಿಗೆ 'ರೆಟ್ರೋ' ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಕಿವಿಮಾತು | Retro

Retro: ತಮಿಳು ನಟ ಸೂರ್ಯ ಮತ್ತು ಸೌತ್ ಬ್ಯೂಟಿ ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ರೆಟ್ರೋ' ಸಿನಿಮಾ ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಮೊದಲ ದಿನ ಉತ್ತಮ ಆರಂಭ ಪಡೆದಿದ್ದೇ ಆದರೂ ನಂತರದಲ್ಲಿ ಚಿತ್ರವು ಮಿಶ್ರ ಪ್ರತಿಕ್ರಿಯೆಗಳಿಂದ ಕೂಡಿದೆ. ಇದರಲ್ಲಿ ಬಹುತೇಕ ಜಾಲತಾಣ ವಿಮರ್ಶೆ ಹಾಗೂ ಪ್ರತಿಕ್ರಿಯೆಗಳೇ ಆಗಿವೆ. ಒಂದಷ್ಟು ನೆಗೆಟಿವ್​ ರಿವ್ಯೂವ್​ಗಳು ಚಿತ್ರದ ಕಲೆಕ್ಷನ್​ಗೆ ಹೊಡೆತ ನೀಡಿದ್ದು, ಇದರಿಂದ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್​ ಅಸಮಾಧಾನ ಹೊರಹಾಕಿದ್ದಾರೆ.

ರೊಮ್ಯಾಂಟಿಕ್-ಆ್ಯಕ್ಷನ್ ಜಾನರ್​ನಲ್ಲಿ ಮೂಡಿಬಂದಿರುವ 'ರೆಟ್ರೋ' ಚಿತ್ರದಲ್ಲಿ ಸೂರ್ಯ ಮತ್ತು ಪೂಜಾ ಹೆಗ್ಡೆ ಅದ್ಭುತವಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು, ಜೋಡಿಯಾಗಿ ಚಿತ್ರಪ್ರೇಮಿಗಳ ಮನ ಗೆದ್ದಿದ್ದಾರೆ, ಮೊದಲೆರೆಡು ದಿನಗಳಲ್ಲಿ ಉತ್ತಮ ಪ್ರದರ್ಶನ ಕಂಡ ರೆಟ್ರೋ ನಂತರದ ದಿನಗಳಲ್ಲಿ ಪ್ರೇಕ್ಷಕರ ಆಗಮನದಲ್ಲಿ ಇಳಿಕೆ ನೋಡುತ್ತಿದೆ. ಕಲೆಕ್ಷನ್​ ಹೊರತಾಗಿ ಚಿತ್ರದ ಬಗ್ಗೆ ಕೆಲವರ ಅಭಿಪ್ರಾಯ, ಅನಿಸಿಕೆ, ವಿಮರ್ಶೆಗಳನ್ನು ನೋಡಿದ ನಿರ್ದೇಶಕರು, ಇಂತಹ ಆನ್​ಲೈನ್​ ವಿಮರ್ಶೆಗಳ ಮೇಲೆ ಎಂದಿಗೂ ಸಿನಿಮಾವನ್ನು ನಿರ್ಧರಿಸಬೇಡಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.