ನ್ಯೂಸ್

ಕರೊನಾ ನಿಯಂತ್ರಿಸಲು ಮೂವರ ಹೆಗಲಿಗೆ ಬಿತ್ತು ಜವಾಬ್ದಾರಿ

ಬೆಂಗಳೂರು: ಕರೊನಾ ನಿಯಂತ್ರಣ ಉಸ್ತುವಾರಿ ವಿಚಾರದಲ್ಲಿ ಸಚಿವರ ನಡುವಿನ ಮುಸುಕಿನ ಗುದ್ದಾಟಕ್ಕೆ ಬ್ರೇಕ್​ ಹಾಕಲು ಸಿಎಂ ಬಿ.ಎಸ್​. ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ.

ಪೈಪೋಟಿಗೆ ಬಿದ್ದವರಂತೆ ಸಚಿವರ ಬಹಿರಂಗ ಹೇಳಿಕೆಗಳಿಂದಾಗಿ ಮುಜುಗರಕ್ಕೆ ಸಿಲುಕಿದ್ದ ಸಿಎಂ, ಮೂವರು ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಯಾರಿಗೆ ಯಾವ ಜವಾಬ್ದಾರಿ ವಹಿಸಿದ್ದಾರೆ ಎಂಬುದರ ಡಿಟೇಲ್ಸ್ ಇಲ್ಲಿದೆ ನೋಡಿ. ಇದನ್ನೂ ಓದಿರಿ ಪೊಲೀಸ್​ ಠಾಣೆಗೇ ‘ಬೇಡಿ’ ಹಾಕಿದ್ರು! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ…

ಕರೊನಾ ನಿಗ್ರಹಕ್ಕೆ ಸಂಬಂಧಿಸಿದ ಎಲ್ಲ ನೀತಿ ನಿರೂಪಣೆ, ಮಾರ್ಗಸೂಚಿ, ಮಾಧ್ಯಮಗಳಿಗೆ ಮಾಹಿತಿ ನೀಡುವುದು, ವಾರ್​ ರೂಮ್​ ಜವಾಬ್ದಾರಿಯನ್ನು ಸಚಿವ ಡಾ. ಕೆ. ಸುಧಾಕರ್​ಗೆ ವಹಿಸಲಾಗಿದೆ. ಕೋವಿಡ್​ ಕೇರ್​ ಸೆಂಟರ್​ಗಳ ಸ್ಥಾಪನೆ ಮತ್ತು ನಿರ್ವಹಣೆ ಹೊಣೆಗಾರಿಕೆಯನ್ನು ಡಿಸಿಎಂ ಅಶ್ವತ್ಥನಾರಾಯಣಗೆ ನೀಡಲಾಗಿದೆ.

ಇನ್ನು ಖಾಸಗಿ ಆಸ್ಪತ್ರೆಗಳ ನಿರ್ವಹಣೆ, ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ, ಚಿಕಿತ್ಸೆ ನಿರಾಕರಿಸದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿಯನ್ನು ಆರ್​. ಅಶೋಕ್​ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್​.ಆರ್​. ವಿಶ್ವನಾಥ್​ ಅವರಿಗೆ ಕೊಡಲಾಗಿದೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಜವಾಬ್ದಾರಿ ಏನು ಎಂಬುದನ್ನು ಮಾತ್ರ ಹೇಳಿಲ್ಲ.

ಶನಿವಾರ ಟಾಸ್ಕ್​ಪೋರ್ಸ್​ ಸಭೆ ನಡೆಸಿದ ಯಡಿಯೂರಪ್ಪ, ಕರೊನಾ ನಿಯಂತ್ರಣ ವಿಚಾರದಲ್ಲಿ ಇಡೀ ವ್ಯವಸ್ಥೆ ಅಚ್ಚುಕಟ್ಟಾಗಿ ಪಾರದರ್ಶಕ ರೀತಿಯಲ್ಲಿ ಕಾರ್ಯಾಚರಿಸಬೇಕು. ಸಚಿವರು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಸಚಿವರಿಗೆ ಸೂಚಿಸಿದ್ದಾರೆ. ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸೀಲ್​ಡೌನ್​ ಮಾಡಲು ಸಿಎಂ ಸೂಚನೆ ನೀಡಿದ್ದಾರೆ.