ನವದೆಹಲಿ: ರಿಚರ್ಡ್ ಅಟೆನ್‌ಬರೋ ನಿರ್ಮಾಣದ 'ಗಾಂಧಿ' ಸಿನಿಮಾ ಬಿಡುಗಡೆಗೂ ಮುನ್ನ ಜಗತ್ತಿನಲ್ಲಿ ಯಾರಿಗೂ ಮಹಾತ್ಮ ಗಾಂಧಿ ಅವರ ಪರಿಚಯವಿರಲಿಲ್ಲ. ಮಹಾತ್ಮ ಗಾಂಧಿ ಅವರ ಬಗ್ಗೆ ಸಿನಿಮಾ ನೋಡಿ ತಿಳಿದುಕೊಂಡಿದ್ದೇನೆ ಎಂದು ಇತ್ತೀಚೆಗೆ ಪ್ರಧಾನಿ ಮೋದಿ ಹೇಳಿದ್ದಾರೆ. ನನಗೆ ಅದು ನಗು ತರಿಸುತ್ತದೆ. ನಮ್ಮ ಕಾಲದಲ್ಲಿ ಶಾಲೆಯಲ್ಲಿ ಅವರ ಬಗ್ಗೆ ಪಠ್ಯಗಳಿದ್ದವು, ಪ್ರಧಾನಿಯವರು ಓದಿದ್ದರೆ ಅಥವಾ ಅಧ್ಯಯನ ಮಾಡಿದ್ದರೆ ಇಂತಹ ಮಾತು ಹೇಳುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಮಹಾತ್ಮಾ ಗಾಂಧೀಜಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. UNO (ಯುನೈಟೆಡ್ ನೇಷನ್ ಆಫೀಸ್) ಮುಂಭಾಗದಲ್ಲಿ ಪ್ರತಿಮೆಗಳಿವೆ. ಅನೇಕ ನಾಯಕರು ಮಹಾತ್ಮ ಗಾಂಧಿಯನ್ನು ಹೊಗಳುತ್ತಾರೆ… ಕನಿಷ್ಠ 70-80 ದೇಶಗಳಲ್ಲಿ ಅವರ ಪ್ರತಿಮೆಗಳಿವೆ. ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದ ದೇಶಗಳಿಗೆ ಮಹಾತ್ಮಾ ಗಾಂಧಿ ಬಗ್ಗೆ ಗೊತ್ತಿದೆ ಎಂದು ಖರ್ಗೆ ಹೇಳಿದರು
ಮಹಾತ್ಮ ಗಾಂಧಿ ಬಗ್ಗೆ ಗೊತ್ತಿಲ್ಲದವರಿಗೆ ಸಂವಿಧಾನದ ಬಗ್ಗೆಯೂ ತಿಳಿದಿರುವುದಿಲ್ಲ. ಮೋದಿ ಅಥವಾ ಬಿಜೆಪಿಯಲ್ಲಿರುವ ಯಾರಾದರೂ ಅಜ್ಞಾನಿಗಳಾಗಿದ್ದರೆ ಚುನಾವಣಾ ಫಲಿತಾಂಶದ ನಂತರ ನೀವು ಬಿಡುವಿರುವಾಗ ಅವರ ಆತ್ಮಚರಿತ್ರೆಯಾದ ದಿ ಸ್ಟೋರಿ ಆಫ್ ಮೈ ಎಕ್ಸ್‌ಪೆರಿಮೆಂಟ್ಸ್ ವಿತ್ ಟ್ರೂತ್ ಅನ್ನು ಓದಿ ಎಂದು ಸಲಹೆ ನೀಡಿದರು. ವಿವೇಕಾನಂದ ಕೇಂದ್ರದಲ್ಲಿ ಧ್ಯಾನ ಮಾಡುವುದರಿಂದ ಅಥವಾ ಗಂಗಾಸ್ನಾನದಿಂದ ಜ್ಞಾನ ಸಿಗುವುದಿಲ್ಲ, ಅದಕ್ಕಾಗಿ ಅಧ್ಯಯನ ಮಾಡಬೇಕು ಎಂದು ಹೇಳಿದರು. (ಏಜೆನ್ಸೀಸ್)