ವೇಮಗಲ್: ಪಟ್ಟಣದ ವೇಮಗಲ್ ಪೊಲೀಸ್ ಠಾಣೆ ಆವರಣದಲ್ಲಿ ವೃತ್ತ ನಿರೀಕ್ಷಕ ಬಿ.ಪಿ.ಮಂಜು ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು.
ಪುರಹಳ್ಳಿ ಜಿ.ಯಲ್ಲಪ್ಪ ಮಾತನಾಡಿ, ವೇಮಗಲ್ನಿಂದ ಬೆಂಗಳೂರಿಗೆ ನಿತ್ಯ ಬೆಳಗ್ಗೆ 6ರಿಂದ 8 ಗಂಟೆಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲು ಹಾಗೂ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಎಚ್.ಕ್ರಾಸ್ ಕಡೆಯಿಂದ ಕೋಲಾರಕ್ಕೆ ಬಸ್ಸುಗಳ ಸಂಖ್ಯೆ ಕಡಿಮೆ ಇದ್ದು, ಶಾಲಾ&-ಕಾಲೇಜಿಗೆ ಹೋಗುವ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಇನ್ನೂ ಆ ಸಮಯದಲ್ಲಿ 2 ಅಥವಾ 3 ಬಸ್ಸನ್ನು ಎಚ್.ಕ್ರಾಸ್ ಕಡೆಯಿಂದ ಕೋಲಾರ್ಗೆ ಹೋಗುವಂತೆ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಕೆಎಸ್ಆರ್ಟಿಸಿ ಜಿಲ್ಲಾಧಿಕಾರಿಗಳಿಗೆ ಸರ್ಕಲ್ ಇನ್ಸ್ಪೆಕ್ಟರ್ ಕಡೆಯಿಂದ ಒಂದು ಮನವಿ ಮಾಡಬೇಕು ಎಂದರು.
ನರಸಾಪುರದ ಸತೀಶ್ ಮಾತನಾಡಿ, ವೇಮಗಲ್, ನರಸಾಪುರದ ಪ್ರಯಾಣಿಕರ ತಂಗುದಾಣ ಮತ್ತು ಅವಶ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.
ನಾಗನಾಳ ರಮೇಶ್, ತಾರಕ್ ಮಂಜು, ಸುಧಾಕರ್ ಅವರು ವಿವಿಧ ಸಮಸ್ಯೆಗಳನ್ನು ಬಗೆಹರಿಸಿಲು ಮನವಿ ಮಾಡಿದರು.
ಪೊಲೀಸ್ ಇನ್ಸ್ಪೆಕ್ಟರ್ ಬಿ.ಪಿ ಮಂಜು ಮಾತನಾಡಿ, ಸಿಸಿ ಕ್ಯಾಮರಾಗಳ ವಿಚಾರವಾಗಿ ಈಗಾಗಲೇ ಸಂಬಂಧಪಟ್ಟವರ ಬಳಿ ಚರ್ಚಿಸಲಾಗಿದೆ. ಸ್ಥಳಿಯ ನಿರುದ್ಯೋಗಿಗಳಿ ಉದ್ಯೋಗ, ಸ್ಥಳಿಯಮಟ್ಟದಲ್ಲಿ ಮುಂದಿನ ಸಭೆ ಮಾಡಲು ಪ್ರಯತ್ನಿಸಲಾಗುವುದು ಎಂದರು.
ರಾಜಕಲ್ಲಹಳ್ಳಿ ಬಿಬಿಎಂಪಿ ಶ್ರೀನಿವಾಸ್, ರಾಮಪುರ ಮುನಿರಾಜು, ಚನ್ನಪ್ಪನಹಳ್ಳಿ ನಾಗರಾಜ್, ಚಂಸಂದ್ರ ಮುನಿರಾಜು, ನರಸಾಪುರ ಸತೀಶ್, ಆರ್ಜೆನಹಳ್ಳಿ ಕೃಷ್ಣಪ್ಪ, ಕುರುಗಲ್ ಗಿರೀಶ್ ಇದ್ದರು.