ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 19ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಪ್ರಕರಣದ ಆಳ ಕೆದಕಿದಷ್ಟು ಹೊಸ ವಿಚಾರಗಳು ಹೊರಬರುತ್ತಿವೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ವಿಚಾರಣೆ ತೀವ್ರಗೊಂಡಂತೆ ಡಿ ಗ್ಯಾಂಗ್ನ ಕರಾಳ ಮುಖ ಬೆಳಕಿಗೆ ಬರುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರ ಒಂದು ಬೆಳಕಿಗೆ ಬಂದಿದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಸ್ಥಳ ಮಹಜರು ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮ್ಯಾನೇಜರ್ ಎಂದು ಕರೆಯಲ್ಪಡುವ ನಾಗ ಹಾಗೂ ಚಾಲಕ ಲಕ್ಷ್ಮಣ್ನನ್ನು ಪೊಲೀಸರು ಮೈಸೂರಿನಲ್ಲಿರುವ ರ್‍ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಸ್ಥಳ ಮಹಜರು ನಡೆಸಿದ್ದರು. ಈ ಹೋಟೆಲ್ನಲ್ಲಿ ರೇಣುಕಸ್ವಾಮಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂದು ತಿಳಿದು ಬಂದಿದ್ದು, ಇದರ ಬೆನ್ನಲ್ಲೇ ಪ್ರಕರಣದ ಮಾಸ್ಟರ್ಮೈಂಡ್ ಹೆಸರು ಕೂಡ ಹೊರಬಂದಿದೆ.
ಇದನ್ನೂ ಓದಿ: ದರ್ಶನ್ ಪತ್ನಿ ಇರೋ ಅಪಾರ್ಟ್ಮೆಂಟ್ನಲ್ಲಿ ನಿತ್ಯವೂ ನಡೆಯುತ್ತೆ ಕರ್ಮಕಾಂಡ : ಪ್ರಶಾಂತ್ ಸಂಬರಗಿ ಬಿಚ್ಚಿಟ್ರು ಸ್ಪೋಟಕ ಮಾಹಿತಿ
ದರ್ಶನ್ ಮ್ಯಾನೇಜರ್ ಆಗಿ ಗುರುತಿಸಿಕೊಂಡಿರುವ ಆರೋಪಿ ನಾಗ ರೇಣುಕಸ್ವಾಮಿ ಹತ್ಯೆ ಹಿಂದಿನ ಮಾಸ್ಟರ್ಮೈಂಡ್ ಎಂದು ತಿಳಿದು ಬಂದಿದೆ. ಏಕೆಂದರೆ ದರ್ಶನ್ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಆರೋಪಿ ನಾಗ ಯಾರ ಮೂಲಕ ರೇಣುಕಸ್ವಾಮಿ ಕರೆಸಬೇಕು ಎಂದು ನಾಗ ತನ್ನ ಸಂಗಡಿಗರೊಂದಿಗೆ ಪ್ಲ್ಯಾನ್ ಮಾಡಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದಕ್ಕಾಗಿ ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಪ್ಲ್ಯಾನ್ ಹಾಕಿದ್ದ ಎಂದು ತಿಳಿದು ಬಂದಿದೆ. ಈ ಕಾರಣಕ್ಕಾಗಿ ಪೊಲೀಸರು ಹೋಟೆಲ್ನಲ್ಲಿ ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಪ್ರಕರಣದ ಪ್ರಮುಖ ಸಾಕ್ಷ್ಯ ಎಂದು ಹೇಳಲಾದ ರೇಣುಕಸ್ವಾಮಿ ಮೊಬೈಲ್ಗೆ ಶೋಧ ಕಾರ್ಯ ಮುಂದುರೆದಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.