ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯ ನಟ ಬ್ಯಾಂಕ್ ಜನಾರ್ದನ್ ಅವರಿಗೆ ದಿಢೀರ್ ಹೃದಯಾಘಾತ ಉಂಟಾಗಿದ್ದು, ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಪೋಷಕ ಕಲಾವಿದರ ಸಂಘದ ಸದಸ್ಯೆ, ನಟಿ ರೇಣು ಶಿಖಾರಿ ಮಾಧ್ಯಮಗಳ ಕೆಲವು ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: DK Shivakumar Sarcastically Questions Reporters: ನೀವೆಲ್ಲ ಯಾಕೆ ನನ್ನ ಮನೆ ಮುಂದೆ ಬಂದಿದ್ದೀರಾ?
ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನನ್ನು ಭೇಟಿ ಮಾಡಿದ ರೇಣು ಶಿಕಾರಿ, "ಜನಾರ್ದನ್ ಅವರು ಚೆನ್ನಾಗಿದ್ದಾರೆ. ನಮ್ಮೆಲ್ಲರನ್ನೂ ನೋಡಿ ತುಂಬಾ ಖುಷಿ ಪಟ್ಟು ಕಣ್ಣೀರಿಟ್ಟರು. ಅವರಿಗೆ ಸದ್ಯ ವೈದ್ಯರಿಂದ ಸೂಕ್ತ ಚಿಕಿತ್ಸೆ ನಡೆಯುತ್ತಿದೆ. ಡಿಸ್ಚಾರ್ಜ್ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇನ್ನು ಅವರಿಗೆ ಆ್ಯಂಜಿಯೋ ಗ್ರಾಮ್ ಮಾಡಿಲ್ಲ" ಎಂದು ಹೇಳಿದರು.
"ಜನಾರ್ದನ್ ಅವರಿಗೆ ಇದು ಮೂರನೇ ಬಾರಿ ಹೃದಯಾಘಾತವಾಗಿದೆ. ಅವರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಹಳೆಯ ಕಲಾವಿದರ ಪರಿಸ್ಥಿತಿ ಎಲ್ಲಾ ಹೀಗೆಯೇ ಇದೆ. ಸದ್ಯ ನಾವೆಲ್ಲರೂ ಅವರ ಜತೆಗಿದ್ದೇವೆ" ಎಂದು ಹೇಳಿದರು.