ನ್ಯೂಸ್

ಖ್ಯಾತ ನಿರ್ದೇಶಕ ಎಸ್​.ಎಸ್​.ಸ್ಟಾನ್ಲಿ ಇನ್ನಿಲ್ಲ! ಮೌನದಲ್ಲಿ ಮುಳುಗಿದ ಚಿತ್ರರಂಗ | stanley

stanley| ತಮಿಳಿನ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ನಟ ಹಾಗೂ ನಿರ್ದೇಶಕ ಆದಂತಹ ಎಸ್.ಎಸ್. ಸ್ಟಾನ್ಲಿ ಅವರು ಇಂದು (15) ಅನಾರೋಗ್ಯದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಸ್ಟಾನ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಎಸ್.ಎಸ್. ಸ್ಟಾನ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದ ಪರಿಣಾಮ ಅವರು ತಮ್ಮ 58ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

2002ರಲ್ಲಿ ಶ್ರೀಕಾಂತ್ ಮತ್ತು ಸ್ನೇಹಾ ನಟನೆಯ 'ಏಪ್ರಿಲ್ ಮಾಧತಿಲ್' ಚಿತ್ರವನ್ನು ಎಸ್.ಎಸ್. ಸ್ಟಾನ್ಲಿ ನಿರ್ದೇಶನ ಮಾಡಿದ್ದರು. ಈ ಚಿತ್ರದ ಯಶಸ್ಸಿನ ನಂತರ ಅವರು ನಟ ಧನುಷ್​ ನಟನೆಯ 'ಪುದುಕೊಟ್ಟೆಯಿಲ್ ಸರವಣನ್' ಚಿತ್ರವನ್ನು ನಿರ್ದೇಶಿಸಿದ್ದರು. ರಾಜಶೇಖರನ್ ನಿರ್ದೇಶನದ 'ಪೆರಿಯಾರ್' ಚಿತ್ರದಲ್ಲಿ ಅವರು ಅರಿಗ್ನಾರ್ ಅಣ್ಣನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ರಾವಣನ್, ಬೊಮ್ಮಾಯಿ ನಾಯಕಿ, ಆಂಡವನ್ ಕಟ್ಟಲಿಯಾ, ಸರ್ಕಾರ್ ಮುಂತಾದ ಕೆಲ ಚಿತ್ರಗಳಲ್ಲಿ ನಟಿಸಿರುವ ಸ್ಟಾನ್ಲಿ ಅವರು ಕೊನೆಯದಾಗಿ ಮಹಾರಾಜ ಚಿತ್ರದಲ್ಲಿ ತಮ್ಮ ಪಾತ್ರ ನಿಭಾಯಿಸಿದ್ದರು. ನಟ ಧನುಷ್, ಸ್ಟಾನ್ಲಿ ಅವರಿಗೆ ವೈದ್ಯಕೀಯ ನೆರವು ನೀಡುತ್ತಿದ್ದರು ಎಂದು ಹೇಳಲಾಗಿದೆ.

(ಏಜೆನ್ಸೀಸ್)

ಅವರ ನಿಧನಕ್ಕೆ ಚಿತ್ರರಂಗ ಶೋಕ ವ್ಯಕ್ತಪಡಿಸಿದ್ದು, ಇಂದು ಸಂಜೆ ತಮಿಳುನಾಡಿನ ವಲಸರವಕ್ಕಂನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎನ್ನಲಾಗಿದೆ.