ನ್ಯೂಸ್

'ಕಾಂತಾರ 2' ರಿಲೀಸ್ ಡೇಟ್ ಫಿಕ್ಸ್​​! ಫ್ಯಾನ್ಸ್ ಕಾತರಕ್ಕೆ ತೆರೆ ಎಳೆದ ರಿಷಭ್​ ಶೆಟ್ಟಿ

ಮೋಹನ್​ ಶೆಟ್ಟಿ

ಬೆಂಗಳೂರು: ಪ್ಯಾನ್​ ಇಂಡಿಯಾ, ಬಹುನಿರೀಕ್ಷಿತ ಕನ್ನಡ ಸಿನಿಮಾಗಳಲ್ಲಿ ಒಂದಾದ ರಿಷಭ್ ಶೆಟ್ಟಿ ನಟನೆಯ ಪ್ರೀಕ್ವೆಲ್​ 'ಕಾಂತಾರ 2' ಚಿತ್ರ ಇದೀಗ ತೆರೆಗೆ ಬರಲು ಸಿದ್ಧವಾಗಿದೆ.

ಬಹುದಿನಗಳಿಂದ ಸಿನಿಮಾದ ಬಗ್ಗೆ ಮಾಹಿತಿ ಪಡೆಯಲು ಕಾತರ ವ್ಯಕ್ತಪಡಿಸುತ್ತಿದ್ದ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗೆ ಕಡೆಗೂ ಸಿಹಿ ಸುದ್ದಿ ನೀಡಿದ ರಿಷಭ್​, ಚಿತ್ರ ಅಕ್ಟೋಬರ್ 02, 2025ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.  ಈ ಕುರಿತು ಹೊಂಬಾಳೆ ಫಿಲಂಸ್​ ತಮ್ಮ ಜಾಲತಾಣದ ಖಾತೆಗಳಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.

2022ರ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ  ತೆರೆಕಂಡು ಬ್ಲಾಕ್​ಬಸ್ಟರ್​ ಚಿತ್ರಗಳ ಸಾಲಿಗೆ ಸೇರಿದ ಕಾಂತಾರ ಭಾಗ 1, ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು. ಚಿತ್ರರಂಗಕ್ಕೆ ಹೊಸ ಆಯಾಮ ಮತ್ತು ಪ್ರಶಸ್ತಿಗಳನ್ನು ಹೊತ್ತು ತಂದ ಕಾಂತಾರ ರೂವಾರಿ, ನಟ ರಿಷಭ್ ಶೆಟ್ಟಿಗೆ, ದೇಶದ ದಿಗ್ಗಜ ನಟರಿಂದ ಪ್ರಶಂಸೆ ವ್ಯಕ್ತವಾಯಿತು. ಸದ್ಯ ಕಾಂತಾರ 2 ಬಿಡುಗಡೆಗೆ ಎದುರುನೋಡುತ್ತಿರುವ ಕನ್ನಡಿಗರ ಮಧ್ಯೆ ಇತರೆ ಚಿತ್ರರಂಗದವರ ಗಮನವೂ ಕನ್ನಡ ಸಿನಿಮಾ ಮೇಲಿದೆ ಎಂಬುದು ಗಮನಾರ್ಹ.