ನ್ಯೂಸ್

ಈ 15 ರೂಲ್ಸ್​ ಫಾಲೋ ಮಾಡೋದಾದ್ರೆ ಮಾತ್ರ ಬನ್ನಿ: ಮದ್ವೆ ಆಮಂತ್ರಣ ಪತ್ರಿಕೆ ನೋಡಿ ಸಂಬಂಧಿಕರು ಶಾಕ್!

ನವದೆಹಲಿ: ಮದುವೆ ಎಂಬುದು ಒಬ್ಬರ ಜೀವನದಲ್ಲಿ ನಡೆಯುವ ಬಹಳ ಮಹತ್ತರವಾದ ಕ್ಷಣ ಎಂದರೆ ತಪ್ಪಾಗಲಾರದು. ಇಬ್ಬರು ವ್ಯಕ್ತಿಗಳು ಒಂದಾಗುವ ಈ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಭಾಗವಹಿಸಿ, ನವಜೋಡಿ ಆಶೀರ್ವದಿಸುತ್ತಾರೆ. ಹೀಗಾಗಿ ಮದುವೆಗೆ ಬಂದವರನ್ನು ಅತ್ಯಂತ ಗೌರವದಿಂದ ನಡೆಸಿಕೊಡಲಾಗುತ್ತದೆ. ಅದರೀಗ ಸಾಮಾಜಿಕ ಜಾಲತಾಣದಲ್ಲಿ ಬೇರೆಯದ್ದೇ ಸುದ್ದಿಯೊಂದು ಹರಿದಾಡುತ್ತಿದೆ.

ಮದುವೆಗೆ ಬನ್ನಿ ಅಂತ ಬಂಧು-ಬಳಗಕ್ಕೆ ಹಾಗೂ ಸ್ನೇಹಿತರಿಗೆ ಆಮಂತ್ರಣವನ್ನು ಕಳುಹಿಸುತ್ತೇವೆ ಮತ್ತು ಖುದ್ದಾಗಿ ಹೋಗಿ ಕೊಡುತ್ತೇವೆ. ಇಂದು ಆಮಂತ್ರಣ ಪತ್ರಕ್ಕಾಗಿಯೇ ಸಾಕಷ್ಟು ಹಣ ಖರ್ಚು ಮಾಡಲಾಗುತ್ತದೆ. ವಿಶೇಷ ವಿನ್ಯಾಸದೊಂದಿಗೆ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯೊಂದು ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಒಂದು ಕ್ಷಣ ಹುಬ್ಬೇರಿಸಿದ್ದಾರೆ.

ಮದುವೆಗೆ ಹಾಜರಾಗುವಾಗ 15 ನಿಯಮಗಳನ್ನು ಅನುಸರಿಸಬೇಕು ಎಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಈ ವಿಶೇಷ ಆಮಂತ್ರಣ ಪತ್ರಿಕೆಯನ್ನು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಆದರೆ, ಇಲ್ಲಿ ದಂಪತಿಯ ಹೆಸರನ್ನು ಬಹಿರಂಗಪಡಿಸಿಲ್ಲ. 15 ನಿಯಮಗಳು ನೋಡಿ, ಇನ್ನು ಈ ಕಣ್ಣಲ್ಲಿ ಏನೇನು ನೋಡ್ಬೇಕೋ ಅಂತ ಹುಬ್ಬೇರಿಸುತ್ತಿದ್ದಾರೆ.

ಹಾಗಾದರೆ ಆ ನಿಯಮಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

1. ಇದು ವಧು-ವರರ ವಿಶೇಷ ದಿನ, ನಿಮ್ಮದಲ್ಲ.

2. ಫೋಟೋಗ್ರಾಫರ್‌ಗೆ ತೊಂದರೆ ಕೊಡಬೇಡಿ

3. ಕಪ್ಪು ಅಥವಾ ಚಿನ್ನದ ಬಣ್ಣದ ಬಟ್ಟೆಗಳನ್ನು ಮಾತ್ರ ಧರಿಸಿ ಮತ್ತು ಕೆಂಪು, ನೀಲಿ, ಹಸಿರು ಮತ್ತು ಬಿಳಿ ಬಣ್ಣವನ್ನು ಧರಿಸಬೇಡಿ.

4. ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಡಿ.

5. ನಿಮಗೆ ಸಂಗೀತವನ್ನು ಕೇಳಲು ಇಷ್ಟವಿಲ್ಲದಿದ್ದರೆ, ಮನೆಗೆ ಹಿಂತಿರುಗಿ. ಇಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.

6. ರಾತ್ರಿಯಿಡೀ ಕುಳಿತುಕೊಳ್ಳಬೇಡಿ

7. ನೀವು ಮದುವೆಗೆ ಯಾವುದೇ ಹಣವನ್ನು ಹಾಕದಿದ್ದರೆ, ನಿಮ್ಮಲ್ಲೇ ಇಟ್ಟುಕೊಳ್ಳಿ. ನಿಮ್ಮ ಅಭಿಪ್ರಾಯ ಅಪ್ರಸ್ತುತವಾಗಿದೆ.

8. ಕುಡಿಯುವಾಗ ನೀವೇ ಗತಿ.

9. ಪ್ರಸ್ತಾವನೆಗಳಿಗೆ ದೊಡ್ಡ ಘೋಷಣೆ ಇಲ್ಲ.

10. ಚಿತ್ರಗಳನ್ನು ಪೋಸ್ಟ್ ಮಾಡುವಾಗ #T ಬಳಸಿ.

11. ಹೊರಗಿಂದ ತಂದ ಮದ್ಯಕ್ಕೆ ಅವಕಾಶವಿಲ್ಲ. ಸಿಕ್ಕಿಬಿದ್ದರೆ, ನಿಮ್ಮನ್ನು ಹೊರಗಾಕಲಾಗುತ್ತದೆ.

ಈ ನಿಯಮಗಳನ್ನು ನೋಡಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇದನ್ನು ತಮಾಷೆಗಾಗಿ ಮಾಡಿರಬಹುದು ಎಂದು ಹಲವರು ಶಂಕಿಸಿದ್ದಾರೆ. ಸದ್ಯ ಈ ಆಮಂತ್ರಣ ಪತ್ರಿಕೆಯ ಫೋಟೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)