ನ್ಯೂಸ್

ಪ್ಯಾಲೆಸ್ಟೈನ್ ದೇಶವನ್ನು ಗುರುತಿಸುವುದು ರಾಷ್ಟ್ರೀಯ ಆತ್ಮಹತ್ಯೆಗೆ ಸಮ: ಇಸ್ರೇಲ್​​ ಪ್ರಧಾನಿ​ ಬೆಂಜಮೀನ್ ನೆತನ್ಯಾಹು| Benjamin Netanyahu

Benjamin Netanyahu: ಪ್ಯಾಲೆಸ್ಟೀನಿಯನ್ ದೇಶವನ್ನು ಗುರುತಿಸುವುದು ನಮ್ಮ ದೇಶಕ್ಕೆ ರಾಷ್ಟ್ರೀಯ ಆತ್ಮಹತ್ಯೆಗೆ ಸಮಾನವಾಗಿರುತ್ತದೆ ಎಂದು ಇಸ್ರೇಲ್​​ ಪ್ರಧಾನಿ​ಬೆಂಜಮೀನ್ ನೆತನ್ಯಾಹು ವಿಶ್ವಸಂಸ್ಥೆಯ ಭಾಷಣದಲ್ಲಿ ಹೇಳಿದ್ದಾರೆ. ಅಲ್ಲದೆ, ಗಾಜಾ ಮೇಲಿನ ಇಸ್ರೇಲ್‌ನ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಸ್ರೇಲ್ ನಮ್ಮ ಗಂಟಲಿನ ಮೇಲೆ ಭಯೋತ್ಪಾದಕ ರಾಷ್ಟ್ರವನ್ನು ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ. ಇಸ್ರೇಲ್‌ನ ರಕ್ತವನ್ನು ಬೇಡುವ ಹಮಾಸ್​ ಮತ್ತು ಯೆಹೂದ್ಯ ವಿರೋಧಿ ಗುಂಪುಗಳನ್ನು ಎದುರಿಸಲು ನಿಮಗೆ ಧೈರ್ಯವಿಲ್ಲದ ಕಾರಣ ನಾವು ರಾಷ್ಟ್ರೀಯ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ನೆತನ್ಯಾಹು ಗುಡುಗಿದ್ದಾರೆ.

ಪ್ಯಾಲೆಸ್ಟೀನಿಯನ್ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಬ್ಬಾಸ್‌ಗೆ ಪಾಶ್ಚಿಮಾತ್ಯ ಬೆಂಬಲವನ್ನು ಅಪಹಾಸ್ಯ ಮಾಡಿದ ನೆತನ್ಯಾಹು, ಪ್ರಾಧಿಕಾರವು ಮೂಲತಃ ಭ್ರಷ್ಟವಾಗಿದೆ. ಅಲ್ಲದೆ, ಸಾವಿರಾರು ಪ್ರತಿಭಟನಾಕಾರರು ಬಂಧನಕ್ಕೆ ಒತ್ತಾಯಿಸಿ ಐತಿಹಾಸಿಕ ಟೈಮ್ಸ್ ಸ್ಕ್ವೇರ್ ಬಳಿ ಮೆರವಣಿಗೆ ನಡೆಸಿದರು. ಯುದ್ಧ ಅಪರಾಧ ಆರೋಪದ ಮೇಲೆ ನೆತನ್ಯಾಹು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಬಂಧನ ವಾರಂಟ್ ಎದುರಿಸುತ್ತಿದ್ದಾರೆ.

ಗಾಜಾದಲ್ಲಿ ಜನಾಂಗೀಯ ಹತ್ಯೆಯ ಆರೋಪಗಳನ್ನು ಪ್ರಶ್ನಿಸಿದರು, ಇಸ್ರೇಲ್ ಪದೇ ಪದೇ ಕರಪತ್ರಗಳನ್ನು ಕಳುಹಿಸುವ ಮೂಲಕ ನಾಗರಿಕರನ್ನು ಹೊರಹೋಗುವಂತೆ ಎಚ್ಚರಿಸಿದೆ. ಮಾನವೀಯ ಕಾನೂನಿನ ಪ್ರಕಾರ, ಬಲವಂತದ ಸ್ಥಳಾಂತರವನ್ನು ಸಹ ಯುದ್ಧ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದವನ್ನು ಅಂತಿಮಗೊಳಿಸಿರಬಹುದು. ನಮಗೆ ಒಪ್ಪಂದವಿದೆ ಎಂದು ನಾನು ಭಾವಿಸುತ್ತೇನೆ. ಗಾಜಾದ ಬಗ್ಗೆ ನಮಗೆ ಒಪ್ಪಂದವಿದೆ ಎಂದು ತೋರುತ್ತಿದೆ. ಇದು ಒತ್ತೆಯಾಳುಗಳನ್ನು ಮರಳಿ ಪಡೆಯುವ ಒಪ್ಪಂದ ಎಂದು ನಾನು ಭಾವಿಸುತ್ತೇನೆ, ಇದು ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವಾಗಲಿದೆ ಎಂದು ಭರವಸೆ ನೀಡಿದ್ದಾರೆ.  (ಏಜೆನ್ಸೀಸ್)