Bihar Hospital: ವಿಶೇಷ ಚೇತನ ರೋಗಿಯೊಬ್ಬ ನಿದ್ದೆ ಮಾಡುವಾಗ ಅವರ ಕಾಲಿಗೆ ಇಲಿ ಕಚ್ಚಿರುವ ಘಟನೆ ಪಾಟ್ನಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶೇಷ ಚೇತನ ರೋಗಿಯೊಬ್ಬ ನಿದ್ದೆ ಮಾಡುವಾಗ ತನ್ನ ಬಲಗಾಲನ್ನು ಇಲಿಗಳು ಕಚ್ಚಿವೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಪತ್ನಿಗಾಗಿ ‘ಇಡ್ಲಿ ಚಟ್ನಿ’ ಮಾಡಿದ ಯುಕೆ ವ್ಯಕ್ತಿ: ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು? | Video Viral
ರೋಗಿ ಅವಧೇಶ್ ಕುಮಾರ್, ಮೇ 18ರ ಬೆಳಿಗ್ಗೆ ತನ್ನ ಬಲಗಾಲಿನ ಕಾಲ್ಬೆರಳುಗಳಲ್ಲಿ ರಕ್ತ ಬರುತ್ತಿರುವುದನ್ನು ಗಮನಿಸಿದ್ದಾನೆ. "ನನ್ನ ಪಾದದಲ್ಲಿ ರಕ್ತ ನೋಡಿ ನನಗೆ ಆಘಾತವಾಯಿತು. ವಾರ್ಡ್‌ನಲ್ಲಿ ಇಲಿಗಳು ವಿನಾಶವನ್ನು ಸೃಷ್ಟಿಸಿವೆ" ಎಂದು ವರದಿಗಾರರಿಗೆ ಆತ ಹೇಳಿದ್ದಾನೆ.
"ಜವಾಬ್ದಾರರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ರಾಜಕೀಯ ಟೀಕೆಗೆ ಕಾರಣವಾಗಿದೆ. ಬಿಜೆಪಿ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರ ಆರೋಗ್ಯ ರಕ್ಷಣಾ ನಿರ್ಲಕ್ಷ್ಯಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಉಲ್ಲೇಖಿಸಿ ರಾಷ್ಟ್ರೀಯ ಜನತಾ ದಳದ ನಾಯಕ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)