ನ್ಯೂಸ್

ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ವಿವಾಹ ಸಮಾರಂಭ; ವಧು ಯಾರು.. ಅನುಮತಿ ಪಡೆದಿದ್ದು ಹೇಗೆ? ಇಲ್ಲಿದೆ ಮಾಹಿತಿ | Rashtrapati Bhavan

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ(Rashtrapati Bhavan) ಫೆಬ್ರವರಿ 12ರಂದು ಒಂದು ಮದುವೆ ನಡೆಯಲಿದೆ. ಈ ವಿವಾಹ ಸಾಮಾನ್ಯ ಮದುವೆಯಾಗಿರುವುದಿಲ್ಲ ಇದು ಇಡೀ ಭಾರತವೇ ನೆನಪಿನಲ್ಲಿಟ್ಟುಕೊಳ್ಳುವ ಐತಿಹಾಸಿಕ ವಿವಾಹವಾಗಲಿದೆ. ಅಷ್ಟಕ್ಕೂ ಈ ಮದುವೆ ಹೇಗೆ ಐತಿಹಾಸಿಕ ಮತ್ತು ರಾಷ್ಟ್ರಪತಿ ಭವನದಲ್ಲಿ ಮದುವೆಯಾಗಲು ಯಾರು ಅನುಮತಿ ಪಡೆದರು? ಎಂಬ ಪ್ರೆಶ್ನೆಗಳು ಹುಟ್ಟುವುದು ಸಹಜ. ಅದಕ್ಕೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

ಸಿಆರ್‌ಪಿಎಫ್ ಅಧಿಕಾರಿ ಪೂನಂ ಗುಪ್ತಾ ಅವರ ವಿವಾಹವು ಫೆಬ್ರವರಿ 12ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಅವರ ಮದುವೆ ಸಾಮಾನ್ಯವಾದದ್ದಲ್ಲ ಬದಲಾಗಿ ಐತಿಹಾಸಿಕವಾಗಿರಲಿದೆ. ಏಕೆಂದರೆ ಅವರ ವಿವಾಹ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವುದು. ಈ ಪೂನಂ ಗುಪ್ತಾ ಪ್ರಧಾನಿ ನರೇಂದ್ರ ಮೋದಿಯವರ ಕಮಾಂಡೋ ಎಂದು ಹೇಳಲಾಗುತ್ತಿದೆ. ಪೂನಂ ಗುಪ್ತಾ ಪ್ರಧಾನಿ ಮೋದಿ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಫೋಟೋ ವೈರಲ್​ ಆದ ಬಳಿಕ ಪೂನಂ ಗುಪ್ತಾ ಅವರು ಪ್ರಧಾನಿ ಮೋದಿ ಅವರ ಮಹಿಳಾ ಕಮಾಂಡೋ ಎಂಬ ಚರ್ಚೆಗಳು ಪ್ರಾರಂಭವಾಗಿವೆ.

ರಾಷ್ಟ್ರಪತಿ ಭವನದಲ್ಲಿ ವಿವಾಹ ನಡೆಸಲು ಅನುಮತಿ ಸಿಕ್ಕಿದ್ದೇಗೆ?

ಪೂನಂ ಗುಪ್ತಾ ಅವರ ವಿವಾಹವು ದೇಶದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ರಾಷ್ಟ್ರಪತಿ ಭವನದಲ್ಲಿ ಒಬ್ಬರ ಮದುವೆ ನಡೆಯುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು. ರಾಷ್ಟ್ರಪತಿ ಭವನದ ಸಂಕೀರ್ಣದಲ್ಲಿರುವ ಮದರ್ ಟೆರೇಸ್ ಕಾಂಪ್ಲೆಕ್ಸ್‌ನಲ್ಲಿ ಪೂನಂ ಗುಪ್ತಾ ವಿವಾಹವಾಗಲಿದ್ದಾರೆ. ಈಗ ರಾಷ್ಟ್ರಪತಿ ಭವನದಲ್ಲಿ ಮದುವೆಯಾಗಲು ಅವರಿಗೆ ಅನುಮತಿ ಹೇಗೆ ಸಿಕ್ಕಿತು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ವಾಸ್ತವವಾಗಿ ಪೂನಂ ಗುಪ್ತಾ ಅವರು ರಾಷ್ಟ್ರಪತಿ ಭವನದಲ್ಲಿ ಮದುವೆಯಾಗುವ ಇಚ್ಛೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವ್ಯಕ್ತಪಡಿಸಿದ್ದರು ಮತ್ತು ಅದಕ್ಕಾಗಿ ವಿನಂತಿಸಿದ್ದರು. ಸಿಆರ್‌ಪಿಎಫ್‌ನಲ್ಲಿನ ಕೆಲಸ ಮತ್ತು ರಾಷ್ಟ್ರಕ್ಕೆ ಸಲ್ಲಿಸುವ ಸೇವೆಯ ಬಗ್ಗೆ ಪೂನಂ ಗುಪ್ತಾ ಅವರ ವೃತ್ತಿಪರತೆ, ಸಮರ್ಪಣೆ ಮತ್ತು ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಪತಿ ಮುರ್ಮು ಅವರು ಪೂನಂ ಗುಪ್ತಾ ಅವರ ಮನವಿಯನ್ನು ಸ್ವೀಕರಿಸಿದರು.

ಪೂನಂ ಗುಪ್ತಾ ಯಾರು?

ವಧುವಾಗಲಿರುವ ಪೂನಂ ಗುಪ್ತಾ, ಸಿಆರ್‌ಪಿಎಫ್‌ನ ಸಹಾಯಕ ಮಹಿಳಾ ಕಮಾಂಡೋ ಆಗಿದ್ದು, ಪ್ರಸ್ತುತ ರಾಷ್ಟ್ರಪತಿ ಭವನದಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ಆಗಿ ನೇಮಕಗೊಂಡಿದ್ದಾರೆ. ಅವರು 74ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮಹಿಳಾ ತುಕಡಿಯನ್ನು ಮುನ್ನಡೆಸಿದರು. ಅವರು ಸಿಆರ್‌ಪಿಎಫ್‌ನಲ್ಲಿ ಸಹಾಯಕ ಕಮಾಂಡೆಂಟ್ ಆಗಿರುವ ಅವನಶ್ ಕುಮಾರ್ ಅವರನ್ನು ಮದುವೆಯಾಗಲಿದ್ದಾರೆ. ಅವರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಗಿದೆ.

ಪೂನಂ ಗುಪ್ತಾ ಮಧ್ಯಪ್ರದೇಶದ ಶಿವಪುರಿಯ ನಿವಾಸಿ. ಆಕೆ ಯಾವಾಗಲೂ ತನ್ನ ಶೈಕ್ಷಣಿಕ ವಿಷಯದಲ್ಲಿ ಮುಂದಿದ್ದರು. ಗಣಿತದಲ್ಲಿ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಅವರು ಗ್ವಾಲಿಯರ್‌ನ ಜಿವಾಜಿ ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ ಪಡೆದಿದ್ದಾರೆ. 2018ರಲ್ಲಿ ಅವರು UPSC CAPF ನಲ್ಲಿ 81ನೇ ರ್ಯಾಂಕ್ ಗಳಿಸಿದರು.(ಏಜೆನ್ಸೀಸ್​​)