ನ್ಯೂಸ್

ಕುಟುಂಬಕ್ಕೆ ಶಾಂತಿ-ಯಶಸ್ಸು ಬರುತ್ತೆ ಅಂತ ಹೇಳಿ ಮಹಿಳೆಯೊಬ್ಬಳ ಮೇಲೆ ಐವರಿಂದ ಮತ್ತೆ ಮತ್ತೆ Aತ್ಯಾಚಾರ!

ಮಹಾರಾಷ್ಟ್ರ: ಲೈಂಗಿಕ ಆಸೆ ತೀರಿಸಿಕೊಳ್ಳಲು ಮಹಿಳೆಯೊಬ್ಬಳ ಮೇಲೆ ಐವರು ಪದೇಪದೆ ಅತ್ಯಾಚಾರ ನಡೆಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ 35 ವರ್ಷದ ಮಹಿಳೆ ಮೇಲೆ ಈ ಐವರು ಪದೇಪದೆ ಅತ್ಯಾಚಾರ ನಡೆಸಿದ್ದರು. ಆರೋಪಿಗಳು ಸಂತ್ರಸ್ತೆಯ ಪತಿಯ ಸ್ನೇಹಿತರು. ಆಕೆಯ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡ ಆರೋಪಿಗಳು ಮನೆಯಲ್ಲಿನ ವಾಸ್ತು ಸಮಸ್ಯೆ ಹೋಗಲಾಡಿಸುವುದಾಗಿ ಹೀಗೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿನ ದುಷ್ಟಶಕ್ತಿಯನ್ನು ತೊಲಗಿಸಲು ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸಿ ಯಶಸ್ಸು ಸಿಗುವಂತೆ ಮಾಟಮಂತ್ರ ಮಾಡುವುದಾಗಿ ಹೇಳಿದ್ದ ಆರೋಪಿಗಳು ಕೊನೆಗೆ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಷಯ ತನಿಖೆಯ ವೇಳೆ ಗೊತ್ತಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.