ನ್ಯೂಸ್

ರಶ್ಮಿಕಾ ಮಂದಣ್ಣ ಕೆನ್ನೆಗೆ ಮುತ್ತಿಟ್ಟ ಸ್ಟಾರ್​ ನಟ; ವಿಡಿಯೋ ವೈರಲ್​

ಮುಂಬೈ: ಸ್ಯಾಂಡಲ್​ವುಡ್​​ ನಟಿ ರಶ್ಮಿಕಾ ಮಂದಣ್ಣ ಪರಭಾಷೆಯಲ್ಲೂ ನಟಿಸುವ ಮೂಲಕವಾಗಿ ಒಳ್ಳೆಯ ಹೆಸರು ಪಡೆದಿದ್ದಾರೆ. ಸಿನಿಮಾ ಸಕ್ಸಸ್​ ಮೀಟ್​ವೊಂದರಲ್ಲಿ ಭಾಗಿಯಾಗಿದ್ದ ವೇಳೆ ಸ್ಟಾರ್​ ನಟನೊಬ್ಬ ರಶ್ಮಿಕಾ ಅವರನ್ನು ತಬ್ಬಿ ಮುತ್ತಿಟ್ಟಿರುವ ವಿಡಿಯೋ ವೈರಲ್​ ಆಗಿದೆ.

ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್​​ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯ್ತು, ನೀರಿಕ್ಷೆ ಮಾಡಿದಷ್ಟು ಆದಾಯ ಗಳಿಸಲಿಲ್ಲ. ಆದರೆ ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಗಳಿಸಿತ್ತು. ಚಿತ್ರದ ಪಾತ್ರಗಳು ರಾತ್ರೋರಾತ್ರಿ ಒಳ್ಳೆಯ ಹೆಸರನ್ನು ಗಳಿಸಿದ್ದವು. ಈ ಯಶಸ್ಸುನ್ನು ಸಂಭ್ರಮಿಸಲು ಚಿತ್ರತಂಡ ಕಪ್ಪು ಕಾರ್ಪೆಟ್​​ ಬ್ಯಾಷ್​​ ಕಾರ್ಯಕ್ರಮವನ್ನು ಆಯೋಸಜಿಸಿತ್ತು. ಈ ಕಾರ್ಯಕ್ರಮದಲ್ಲಿ ಇಡೀ ತಾರಾಂಗಣವೇ ಭಾಗಿಯಾಗಿತ್ತು.

ರಶ್ಮಿಕಾ ಮಂದಣ್ಣ ಪಾರ್ಟಿಯಲ್ಲಿ ಸಖತ್​ ಸ್ಟೈಲಿಶ್ ಆಗಿ ಪ್ರವೇಶ ಮಾಡಿದರು, ರಶ್ಮಿಕಾ ಬರುತ್ತಿರುವುದನ್ನು ಗಮನಿಸಿದ ರಣಬೀರ್ ಕಪೂರ್  ಪ್ರೀತಿಯಿಂದ ತಬ್ಬಿ ರಶ್ಮಿಕಾ ಅವರ ಕೆನ್ನೆಗೆ ಸಿಹಿ ಮುತ್ತು ನೀಡಿದರು.  ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಮತ್ತೊಂದು ಹೃದಯಸ್ಪರ್ಶಿ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅಲೆಗಳನ್ನು ಮೂಡಿಸುತ್ತಿದ್ದು, ಚಿತ್ರದ ಸಂಪೂರ್ಣ ತಂಡವು ಚಿತ್ರಗಳಿಗಾಗಿ ಒಟ್ಟಿಗೆ ಪೋಸ್ ನೀಡುವುದನ್ನು ಸೆರೆಹಿಡಿಯುತ್ತದೆ. ಮೇಳದಲ್ಲಿ ಬಾಬಿ ಡಿಯೋಲ್, ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಟ್ರಿಪ್ಪಿ ಡಿಮಿ, ಸೌರಭ್ ಸಚ್‌ದೇವ, ಸಿದ್ದಾಂತ್ ಕಾರ್ನಿಕ್, ಅನಿಲ್ ಕಪೂರ್, ಸಲೋನಿ ಬಾತ್ರಾ, ಸಂದೀಪ್ ರೆಡ್ಡಿ ವಂಗಾ ಮತ್ತು ನಿರ್ಮಾಪಕ ಭೂಷಣ್ ಕುಮಾರ್ ಸೇರಿದಂತೆ ಇತರರು ಇದ್ದಾರೆ. ವಿನೋದ ಮತ್ತು ಸಂಘಟಿತ ಪ್ರಯತ್ನದಲ್ಲಿ, ಅವರೆಲ್ಲರೂ ಚಲನಚಿತ್ರದಿಂದ ಬಾಬಿಯ ವೈರಲ್ ಬೆರಳಿನ ಮೇಲೆ ಬಾಯಿಯ ಭಂಗಿಯನ್ನು ತಮಾಷೆಯಾಗಿ ಅನುಕರಿಸಿದ್ದಾರೆ.