ನ್ಯೂಸ್

ರಾಧಿಕಾ ಪಂಡಿತ್​ ಫೋಟೋಗೆ ರಮ್ಯಾ ಮಾಡಿದ ಕಮೆಂಟ್​ ಇದು!

manjunathktgns

ಕಳೆದ ಕೆಲ ದಿನಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಸ್ಯಾಂಡಲ್​ವುಡ್​ ನಟಿ ರಮ್ಯಾ, ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಒಂದಾದ ಮೇಲೊಂದು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದಾರೆ. ಇದೀಗ ಅದೇ ರೀತಿ ರಾಧಿಕಾ ಪಂಡಿತ್​ ಅವರ ಫೋಟೋಕ್ಕೂ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

ಇಬ್ಬರು ಮುದ್ದು ಪುಟಾಣಿಗಳ ಜತೆ ಲಾಕ್​ಡೌನ್ ಕಳೆಯುತ್ತಿರುವ ರಾಧಿಕಾ, ಇತ್ತೀಚೆಗಷ್ಟೇ ನೀನು ನೀನಾಗಿರು ಎಂಬ ಕ್ಯಾಪ್ಶನ್​ ನೀಡಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಚಿತ್ರಕ್ಕೆ ರಮ್ಯಾ ಕಮೆಂಟ್​ ರವಾನಿಸಿದ್ದು, 'ತುಂಬ ಮುದ್ದಾಗಿದೆ' ಎಂದಿದ್ದಾರೆ. ಬಳಿಕ ಆ ಕಮೆಂಟ್​ಗೆ ರಾಧಿಕಾ ಸಹ ಪ್ರತಿಕ್ರಿಯಿಸಿದ್ದು, 'ನಿಮ್ಮಷ್ಟು ಮುದ್ದಾಗಿಲ್ಲ' ಎಂದಿದ್ದಾರೆ. ಸದ್ಯ ಈ ಇಬ್ಬರು ಸ್ಟಾರ್​ಗಳ ಕಮೆಂಟ್​ಗಳಿಗೆ ಅಭಿಮಾನಿ ವಲಯದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ರಕ್ಷಿತಾ ಮತ್ತು ರಮ್ಯಾ ನಡುವೆ ವೈಮನಸ್ಸು ಮನೆಮಾಡಿದೆ. ಇಬ್ಬರ ನಡುವೆ ಯಾವುದೂ ಸರಿ ಇಲ್ಲ ಎಂಬ ಸುದ್ದಿ ಮೊದಲಿಂದಲೂ ಹರಿದಾಡುತ್ತಿತ್ತು. ಆದರೆ, ಇತ್ತೀಚೆಗಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತ ಈ ಹಿಂದೆ ಹರಿದಾಡಿದ್ದ ವದಂತಿಗಳಿಗೆ ಬ್ರೇಕ್​ ಹಾಕಿದ್ದರು. ಇದೀಗ ರಮ್ಯಾ ಮತ್ತೆ ಯಥಾಸ್ಥಿತಿಗೆ ಮರಳುವ ಸೂಚನೆ ನೀಡಿದ್ದಾರೆ. ಸಾಕಷ್ಟು ಮಂದಿ ಮತ್ತೆ ಸಿನಿಮಾದತ್ತ ಬನ್ನಿ ಎಂದೂ ಅವರಿಗೆ ಸಂದೇಶ ರವಾನಿಸುತ್ತಿದ್ದಾರೆ.