ಮುಂಬೈ ಪ್ರೀಮಿಯರ್‌ನಲ್ಲಿ 'ರಾಮಾಯಣ' ನೋಡಿ ಕೊಂಡಾಡಿದ ಖ್ಯಾತ ವಿಮರ್ಶಕರು 
ನ್ಯೂಸ್

Ramayana Reviews: 'ರಾಮಾಯಣ' ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲು! ಮುಂಬೈ ಪ್ರೀಮಿಯರ್‌ನಿಂದ ಭರ್ಜರಿ ರೆಸ್ಪಾನ್ಸ್

Ramayana movie premiere: ಈ ವರ್ಷದ ಬಹುನಿರೀಕ್ಷಿತ ಭಾರತೀಯ ಸಿನಿಮಾ 'ರಾಮಾಯಣ' ನವೆಂಬರ್ 5ರಂದು ರಿಲೀಸ್ ಆಗಲು ಸಜ್ಜಾಗಿದೆ. ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಬಿಗ್ ಬಜೆಟ್ ಸಿನಿಮಾದ ಪ್ರೀಮಿಯರ್ ಪ್ರದರ್ಶನ ನವೆಂಬರ್ 3 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಸಿನಿಮಾತಂಡದ ಕುಟುಂಬಸ್ಥರು ಹಾಗೂ ಚಿತ್ರರಂಗದ ಪ್ರಮುಖರು ವೀಕ್ಷಿಸಿದ ಈ ಶೋಗೆ ಆರಂಭದಲ್ಲೇ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದೆ.

ಆಶಿಶ್ ಚಂಚಲಾನಿ ಮೆಚ್ಚುಗೆ

‘ರಾಮಾಯಣ ಅತ್ಯುತ್ತಮ ಆಕ್ಷನ್ ಹಾಗೂ ದೃಶ್ಯ ವೈಭವವಿರುವ ಬ್ಲಾಕ್‌ಬಸ್ಟರ್ ಸಿನಿಮಾ. ನಿತೇಶ್ ತಿವಾರಿ ನಿರ್ದೇಶನ ಚಿತ್ರದ ಜೀವಾಳ’ ಎಂದು ಪ್ರಸಿದ್ಧ ಯೂಟ್ಯೂಬರ್ ಆಶಿಶ್ ಚಂಚಲಾನಿ ಬರೆದುಕೊಂಡಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ಸಕ್ಕತ್ತಾಗಿ ನಟಿಸಿದ್ದಾರೆ ಎಂದಿರುವ ಅವರು, ಸಿನಿಮಾವನ್ನು ಥಿಯೇಟರ್‌ನ ದೊಡ್ಡ ಪರದೆಯಲ್ಲೇ ನೋಡಬೇಕೆಂದು ಕೋರಿದ್ದಾರೆ.

5 ಸ್ಟಾರ್ ನೀಡಿದ ಧ್ರುವಲ್ ಪಟೇಲ್

ಛಾಯಾಗ್ರಾಹಕ ಹಾಗೂ ನಿರ್ದೇಶಕ ಧ್ರುವಲ್ ಪಟೇಲ್ ಈ ಚಿತ್ರಕ್ಕೆ 5/5 ರೇಟಿಂಗ್ ನೀಡಿದ್ದು, ‘ಇದು ಭಾರತೀಯ ಚಿತ್ರರಂಗಕ್ಕೇ ಒಂದು ಹೊಸ ಬೆಂಚ್‌ಮಾರ್ಕ್. ಚಿತ್ರಮಂದಿರಗಳಲ್ಲಿ ದೊಡ್ಡ ಪರದೆಯಲ್ಲೇ ಇದನ್ನು ವೀಕ್ಷಿಸಿ ಅನುಭವಿಸಬೇಕು’ ಎಂದಿದ್ದಾರೆ.

ವಿಎಫ್‌ಎಕ್ಸ್ ಮತ್ತು ಬೌಂಡರಿ ದಾಟಿದ ಕಲ್ಪನೆ

ಮಹರ್ಷಿ ವಿಶ್ವಾಮಿತ್ರ ಪಾತ್ರಧಾರಿ ಅಜಿಂಕ್ಯ ದೇವ್, ‘ವಿಎಫ್‌ಎಕ್ಸ್, ನಟನೆ ಮತ್ತು ಸೆಟ್‌ಗಳು ಅತ್ಯದ್ಭುತವಾಗಿದ್ದು, ಇದೊಂದು ದೊಡ್ಡ ಅನುಭವ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೆಯೇ ನಟ ಕುನಾಲ್ ಕಪೂರ್, ‘ನಮ್ಮ ಕಲ್ಪನೆಯನ್ನೂ ಮೀರಿದ ದೃಶ್ಯಗಳು ಪರದೆಯ ಮೇಲೆ ಮೂಡಿಬಂದಿದ್ದು, ಈ ದೊಡ್ಡ ಸಾಹಸದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ’ ಎಂದಿದ್ದಾರೆ.

ಇದನ್ನೂ ಓದಿ: ಅಮೆರಿಕ ಚುನಾವಣೆಯಲ್ಲಿ ಡೆಮೋಕ್ರಾಟ್‌ಗಳಿಗೆ ಭರ್ಜರಿ ಮುನ್ನಡೆ: ಟ್ರಂಪ್ ಹಾಕಿದ ‘VETO’ ಪೋಸ್ಟ್ ವೈರಲ್! | US Midterm Elections

ಒಟ್ಟಾರೆಯಾಗಿ ಪ್ರಥಮ ಪ್ರದರ್ಶನದಲ್ಲೇ 'ರಾಮಾಯಣ' ಅತ್ಯುತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದು, ಭಾರತೀಯ ಪ್ರೇಕ್ಷಕರು ಮತ್ತು ವಿಮರ್ಶಕರು ಈ ದೃಶ್ಯಕಾವ್ಯವನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.