ಹೈದರಾಬಾದ್: ಗ್ಲೋಬಲ್ ಸ್ಟಾರ್ ರಾಮ್ ಚರಣ್(Ram Charan) ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಮೇಣದ ಪ್ರತಿಮೆ ಸಿಂಗಾಪುರದ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಗಿದೆ.
ಇದನ್ನೂ ಓದಿ: Tirupati ತಿಮ್ಮಪ್ಪ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಲ್ವಾ? ಚಿಂತಿಸಬೇಡಿ, ಹೀಗೆ ಮಾಡಿದರೆ ತಕ್ಷಣ ದರ್ಶನ..!
ಐಐಎಫ್‌ಎ ಫೆಸ್ಟಿವಲ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ ರಾಮ್ ಚರಣ್(Ram Charan), 'ಟುಸ್ಸಾಡ್ಸ್ ಕುಟುಂಬದ ಭಾಗವಾಗಿರುವುದು ಗೌರವವಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಟುಸ್ಸಾಡ್ಸ್ ನಲ್ಲಿ ಬಾಲಿವುಡ್ನ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ಶಾರುಖ್ ಖಾನ್, ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್, ಹೃತಿಕ್ ರೋಷನ್, ಕತ್ರಿನಾ ಕೈಫ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವರುಣ್ ಧವನ್, ನಟಿ ಕಾಜೋಲ್, ಟಾಲಿವುಡ್ ನಟರಾದ ಮಹೇಶ್ ಬಾಬು, ಅಲ್ಲು ಅರ್ಜುನ್, ಪ್ರಭಾಸ್ ಮತ್ತಿತರರು ಮೇಣದ ಪ್ರತಿಮೆಗಳ ರೂಪದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ರಾಮ್ ಚರಣ್ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ
ಇನ್ನು ರಾಮ್ ಚರಣ್ ಪ್ರಸ್ತುತ 'ಗೇಮ್ ಚೇಂಜರ್' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದಾರೆ. ರಾಜಕೀಯ ಆಕ್ಷನ್ ಚಿತ್ರವಾಗಿ ಇದನ್ನು ನಿರ್ಮಿಸಲಾಗುತ್ತಿದೆ. ತೆಲುಗಿನ ಗುಸ್ಸಾಡಿ, ಕೊಮ್ಮು ಕೋಯ, ತಪ್ಪೇಟ ಗುಲ್ ಕಲಾ ಪ್ರಕಾರಗಳ ಜೊತೆಗೆ ಒಡಿಶಾ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಸಾಂಸ್ಕೃತಿಕ ನೃತ್ಯ ಶೈಲಿಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.