ನ್ಯೂಸ್

ರಕ್ಷಾ ಬಂಧನ: ಸಹೋದರರಿಗೆ ರಾಖಿ ಕಟ್ಟುವಾಗ ಸಹೋದರಿಯರು ಈ 5 ತಪ್ಪುಗಳು ಮಾಡಬೇಡಿ! | Raksha Bandhan

Raksha Bandhan: ರಕ್ಷಾ ಬಂಧನ ಹಬ್ಬ(ಆ.9) ಸಹೋದರ- ಸಹೋದರಿಯರ ಪ್ರೀತಿಯ ಸುಂದರ ಸಂಕೇತವಾಗಿದೆ. ಈ ದಿನದಂದು ಸಹೋದರಿಯರು ತನ್ನ ಪ್ರೀತಿಯ ಸಹೋದರ ಕೈಗೆ ದಾರವನ್ನು(ರಾಖಿ) ಕಟ್ಟುವ ಮೂಲಕ ಹಬ್ಬ ಆಚರಿಸುತ್ತಾರೆ. ಬಳಿಕ ಅವರ ಸಹೋದರರ ದೀರ್ಘಾಯುಷ್ಯದ ಬಗ್ಗೆ ದೇವರಲ್ಲಿ ಪಾರ್ಥಿಸುತ್ತಾರೆ.

ಇತ್ತ ಸಹೋದರರು ಕೂಡ ತಮ್ಮ ಸಹೋದರಿಯರನ್ನು ಜೀವನಪರ್ಯಂತ ಸಂತೋಷದಿಂದ ನೋಡಿಕೊಳ್ಳಲು ಪ್ರತಿಜ್ಞೆ ಮಾಡುತ್ತಾರೆ. ಇದೀಗ ಆಗಸ್ಟ್​ 9ರಂದು ರಕ್ಷಾ ಬಂಧನ ಬರುತ್ತಿದ್ದು, ಅನೇಕ ಸಹೋದರಿಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ ಹಿಂದು ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ನಿಯಮಗಳನ್ನು ಹೊಂದಿದೆ. ಜೋತಿಷ್ಯದ ಪ್ರಕಾರ, ಈ ನಿಯಮಗಳನ್ನು ಪ್ರತಿಯೊಬ್ಬರು ಅನುಸರಿಸುವುದ ಬಹಳ ಮುಖ್ಯ. ಇದನ್ನು ಪ್ರತಿಯೊಬ್ಬ ಸಹೋದರಿಯೂ ರಾಖಿ ಕಟ್ಟುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು.

1.ರಾಹುಕಾಲ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಬಾರದು. ಹಾಗೆ ಮಾಡುವುದು ಜೋತಿಷ್ಯದ ಪ್ರಕಾರ, ಅದು ಅಶುಭ ಎಂದು ಪರಿಗಣಿಸಲಾಗುತ್ತದೆ.

2. ನೀವು ನಿಮ್ಮ ಸಹೋದರರಿಗೆ ರಾಖಿ ತೆಗೆದುಕೊಳ್ಳುವಾಗ ಅದು ಮುರಿದು ಹೋಗದಂತೆ ಮತ್ತು ಯಾವುದೇ ಹಾನಿ ಆಗದಂತೆ ನೋಡಿಕೊಳ್ಳಬೇಕು. ರಾಖಿಗೆ ಹಾನಿಯಾದ್ರೆ ಅದು ಅಶುಭ ಎಂದು ಪರಿಗಣಿಸಲಾಗುತ್ತದೆ.

3. ಸಹೋದರಿಯರು ದಕ್ಷಿಣಕ್ಕೆ ಮುಖ ಮಾಡಿ ರಾಖಿ ಕಟ್ಟಬಾರದು. ಪೂರ್ವ ಹಾಗೂ ಉತ್ತರ ದಿಕ್ಕುಗಳ ಕಡೆ ಮುಖ ಮಾಡಿ ರಾಖಿ ಕಟ್ಟಬೇಕು. ಇದು ಶುಭ.

4.ಹಣೆಗೆ ತಿಲಕ ಹಚ್ಚಿದ ನಂತರ ಸೋದರನ ಮುರಿದ ಅಕ್ಕಿಗಳನ್ನು ತಲೆ ಮೇಲೆ ಹಾಕಬೇಡಿ. ಒಳ್ಳೆಯ ಅಕ್ಕಿಕಾಳು ಬಳಸಿ. ಇದರಿಂದ ಅವರ ಆಯುಷ್ಯ ಹೆಚ್ಚಾಗಲಿದೆ.

5.ರಾಖಿಯ ದಿನದಂದು, ಸಹೋದರನಿಗೆ ಕಪ್ಪು ಬಣ್ಣದ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಾರದು ಅಥವಾ ನೀಡಬಾರದು. ಅಲ್ಲದೆ, ಸಹೋದರನಿಗೆ ಕಪ್ಪು ಬಣ್ಣದ ರಾಖಿಯನ್ನು ಕಟ್ಟಬಾರದು. ಹಾಗೆ ಮಾಡುವುದನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.