ನ್ಯೂಸ್

ಜಮೀನು ನೋಂದಣಿಗೆ ಬಂದ ರಜನಿಕಾಂತ್​ ನೋಡಲು ಅಭಿಮಾನಿಗಳ ನೂಕುನುಗ್ಗಲು..!

ಚೆಂಗಲ್ಪಟ್ಟು(ತಮಿಳುನಾಡು): ಜಿಲ್ಲೆಯ ತಿರುಪೋರೂರಿನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಜಮೀನು ಖರೀದಿಸಿದ್ದು, ನೋಂದಣಿಗೆ ಆಗಮಿಸಿದ ಅವರನ್ನು ನೋಡಲು ರಿಜಿಸ್ಟ್ರಾರ್ ಕಚೇರಿಯ ಹೊರಗೆ ಸಹಸ್ರಾರು ಅಭಿಮಾನಿಗಳು ನೆರೆದಿದ್ದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಇದರ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ರಜನಿಕಾಂತ್ ಶನಿವಾರ (ಮಾರ್ಚ್ 2) ತಮಿಳುನಾಡಿನ ತಿರುಪೋರೂರ್‌ನಲ್ಲಿ ಕಾಣಿಸಿಕೊಂಡರು, ಅವರು ಪಟ್ಟಣದ ಸಮೀಪ ಜಮೀನು ಖರೀದಿಸಲು ಹೊರಟಿದ್ದಾರೆ ಎಂದು ಸುದ್ದಿ ಕಿವಿಯಿಂದ ಕಿವಿಗೆ ಬಿದ್ದು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು.

ರಜನಿ ಅವರನ್ನು ಕಾಣುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕಚೇರಿಯ ಹೊರಗೆ ಗುಂಪುಗೂಡಿದ್ದು, ಕಡೆಗೆ ಅವರ ಕಾರು ರಿಜಿಸ್ಟ್ರಾರ್ ಕಚೇರಿಯನ್ನು ಕಷ್ಟ ಪಟ್ಟು ಜನರನ್ನು ದೂರಸರಿಸಿ ತಲುಪಬೇಕಾಯಿತು.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ನಟ ಬಿಳಿ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಕಚೇರಿಯಿಂದ ಹೊರಬಂದ ಬಳಿಕ ರಜನಿ ಕಾಂತ್​ ಅಭಿಮಾನಿಗಳತ್ತ ಕೈ ಬೀಸಿ ಕೆಲವರ ಜತೆ ಸೆಲ್ಫಿಗೆ ಪೋಸ್ ನೀಡಿದರು.