ನ್ಯೂಸ್

ರಾಜಸ್ಥಾನ ಶಾಲಾ ಕಟ್ಟಡ ದುರಂತ: 5 ಶಿಕ್ಷಕರನ್ನು ಅಮಾನತುಗೊಳಿಸಿದ ಶಿಕ್ಷಣ ಇಲಾಖೆ.. School

School : ರಾಜಸ್ಥಾನದ ಜಲವಾರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮೇಲ್ಛಾವಣಿ ಕುಸಿದು, 7 ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಶಿಕ್ಷಣ ಇಲಾಖೆ ಶಾಲೆಯ 5 ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಮೀನಾ ಗರ್ಗ್, ಜಾವೇದ್ ಅಹ್ಮದ್, ರಾಮ್‌ವಿಲಾಸ್ ಲವ್ವಂಶಿ, ಕನ್ಹಯ್ಯಾಲಾಲ್ ಸುಮನ್ ಮತ್ತು ಬದ್ರಿಲಾಲ್ ಲೋಧಾ ಎಂಬ 5 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ತಿಳಿಸಿದ್ದಾರೆ.

ರಾಜಸ್ಥಾನ ಸಿಎಂ ಪ್ರತಿಕ್ರಿಯೆ

ರಾಜಸ್ಥಾನದ ಮುಖ್ಯಮಂತ್ರಿ ಭಜನ್​ ಲಾಲ್​ ಶರ್ಮಾ ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದು, " ಮುಗ್ದ ಮಕ್ಕಳ ಸಾವು ಬೇಸರ ತಂದಿದೆ. ಮೃತ ವಿದ್ಯಾರ್ಥಿಗಳ ಕುಟುಂಬದೊಂದಿಗೆ ರಾಜ್ಯ ಸರ್ಕಾರ ಇದೆ. ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'' ಎಂದರು.

ಈ ವೇಳೆ ಆರೋಗ್ಯ ಸಚಿವ ಮದನ್​ ದಿಲವಾರ್​ರವರನ್ನು ಪರಿಸ್ಥಿತಿಯನ್ನು ಅವಲೋಕಿಸಲು ದುರಂತ ಸ್ಥಳಕ್ಕೆ ಕಳುಹಿಸಲಾಗಿದೆ. ದುರಂತ ನಡೆದ ಶಾಲೆ ಬಗ್ಗೆ ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಅಂತಹ ಘಟನೆ ಮತ್ತೆ ಸಂಭವಿಸದಂತೆ ನೋಡಿಕೊಳ್ಳಲಾಗುವುದು ಎಂದರು. (ಏಜೆನ್ಸೀಸ್​​)