ಸಾಂದರ್ಭಿಕ ಚಿತ್ರ 
ನ್ಯೂಸ್

ತಮ್ಮನ ಸಾವಿನಿಂದ ಮನನೊಂದ ಯುವತಿ ನೀರಿನ ಟ್ಯಾಂಕ್​ಗೆ ಹಾರಿ ಪ್ರಾಣ ಬಿಟ್ಟಳು

ರಾಜಸ್ಥಾನ: ತಮ್ಮನ ಸಾವಿನಿಂದ ಮನೊಂದಿದ್ದ ಸಹೋದರಿ ನೀರಿನ ಟ್ಯಾಂಕ್‌ಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ರಾಜಸ್ಥಾನದ ಬಿಕಾನೇರ್​ನ ನುಲ್ಲಾದಲ್ಲಿ ನಡೆದಿದೆ.

ರೇಖಾ (21) ಮೃತ ಯುವತಿ, ಸಹೋದರ ಸಂದೀಪ್‌(19)ನ ಸಾವಿನಿಂದ ಅಸಮಾಧಾನಗೊಂಡಿದ್ದ ಈಕೆ ತನ್ನ ಮನೆಯ ಸಮೀಪದಲ್ಲಿರುವ ನೀರಿನ ಟ್ಯಾಂಕ್‌ಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಬಳಿ ತುಂಬಿ ಹರಿಯುತ್ತಿದ್ದ ನಾಲೆಗೆ ಅಚಾನಕ್ಕಾಗಿ ಬಿದ್ದು ಸಂದೀಪ್ ಮೃತಪಟ್ಟಿದ್ದರು. ಸಹೋದರ ಇನ್ನಿಲ್ಲ ಎನ್ನುವ ಸಂಗತಿ ರೇಖಾಳಿಗೆ ತುಂಬಾ ನೋವನ್ನುಂಟು ಮಾಡಿತ್ತು. ಹೀಗಾಗಿ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.