ಜೈಪುರ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಗುರುವಾರ ಇಂದಿರಾ ಗಾಂಧಿ ಸ್ಮಾರ್ಟ್ಪೋಣ್ ಯೋಜನೆಗೆ ಚಾಲನೆ ನೀಡಿದೆ. ಈ ವರ್ಷದ ಬಜೆಟ್ನಲ್ಲಿ ಮಹಿಳೆಯರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಸ್ಮಾರ್ಟ್ಪೋನ್ ವಿತರಿಸಲಾಗುವುದು ಎಂದು ಸಿಎಂ ಘೋಷಿಸಿದ್ದರು.
ಈ ಯೋಜನೆ ಅಡಿಯಲ್ಲಿ ಸರ್ಕಾರದ ವತಿಯಿಂದ ಮಹಿಳೆಯರಿಗೆ ಉಚಿತ ಡೇಟಾದೊಂದಿಗೆ ಸ್ಮಾರ್ಟ್ಪೋನ್ಗಳನ್ನೂ ವಿತರಿಸಲಾಗುತ್ತಿದೆ. 1 ಕೋಟಿ 40 ಲಕ್ಷ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಲಿದ್ದು, ಮೊದಲ ಹಂತದಲ್ಲಿ 40 ಲಕ್ಷ ಮಹಿಳೆಯರಿಗೆ ಸ್ಮಾರ್ಟ್ಪೋನ್ ಸಿಗಲಿದೆ. ಜೈಪುರದ ಬಿರ್ಲಾ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಫಲಾನುಭವಿಗಳಿಗೆ ಸ್ಮಾರ್ಟ್ಪೋನ್ಗಳನ್ನೂ ವಿತರಿಸಿದರು.
ಇದನ್ನೂ ಓದಿ: ದುರುದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು, ಮುಟ್ಟುವುದು ಅಪರಾಧವಲ್ಲ: ಬ್ರಿಜ್ ಭೂಷಣ್ ಶರಣ್ ಸಿಂಗ್
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್ ಜ್ಞಾನವೇ ಶಕ್ತಿ ಎಂಬ ಘೋಷವಾಕ್ಯದೊಂದಿಗೆ ಮಹಿಳೆಯರಿಗೆ ಸ್ಮಾರ್ಟ್ಪೋನ್ಗಳನ್ನೂ ವಿತರಿಸಲಾಗುತ್ತಿದೆ. ಈ ಯೋಜನೆ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿ ಮಾಡಲಾಗಿದೆ. ಮೊದಲ ಹಂತದಲ್ಲಿ ವಿಧವೆಯರು, ಪಿಂಚಣಿ ಪಡೆಯುವ ಒಂಟಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿರುವ ಕುಟುಂಬಗಳಿಗೆ ಸ್ಮಾರ್ಟ್ಫೋನ್ಗಳನ್ನೂ ವಿತರಿಸಲಾಗುತ್ತಿದೆ.
ಅರ್ಜಿ ಹಾಕುವ ವೇಳೆ ಫಲಾನುಭವಿಗಳು ತಮ್ಮಗೆ ಬೇಕಾದ ಸ್ಮಾರ್ಟ್ಫೋನ್ ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ನಾವೇ ಫೋನ್ ಖರೀದಿಸುತ್ತೇವೆ ಎನ್ನುವವರಿಗೆ ನೇರ ವರ್ಗಾವಣೆ(DBT) ಮೂಲಕ 6,800 ರೂಪಾಯಿಗಳನ್ನೂ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಯೋಜನೆಯ ಮೊದಲ ಹಂತದಲ್ಲಿ 40 ಲಕ್ಷ ಮಹಿಳೆಯರಿಗೆ ಸ್ಮಾರ್ಟ್ಫೋನ್ ಪಡೆಯಲಿದ್ದಾರೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.