ನ್ಯೂಸ್

ರಾಜಸ್ಥಾನದ ಕೋಟಾದಲ್ಲಿ 18 ವರ್ಷದ ವಿದ್ಯಾರ್ಥಿ ಶವ ಪತ್ತೆ: ಮರಣೋತ್ತರ ಪರೀಕ್ಷೆಗೆ ಪೋಷಕರು ನಿರಾಕರಣೆ

ಜೈಪುರ:  ರಾಜಸ್ಥಾನದ ಕೋಟಾದಲ್ಲಿ 18 ವರ್ಷದ ಕೋಚಿಂಗ್ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೊಠಡಿಯ ಸ್ನಾನಗೃಹದಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾನೆ.

ಹಾಸ್ಟೆಲ್​ನ ಉಸ್ತುವಾರಿಯಿಂದ ಮಾಹಿತಿ ಪಡೆದ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದೆ. ಆದರೆ, ಬಾಲಕನ ಪೋಷಕರ ಕೋರಿಕೆಯ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲು ಪೋಷಕರು ಕೂಡ ನಿರಾಕರಿಸಿದ್ದಾರೆ. ಅವರ ಇಚ್ಛೆಯಂತೆ ಮೃತದೇಹವನ್ನು ಅಂತಿಮ ವಿಧಿವಿಧಾನಕ್ಕಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಪ್ರಯಾಗರಾಜ್ ನಿವಾಸಿ ಕುಶಾಗ್ರಾ ರಸ್ತೋಗಿ ಎಂದು ಗುರುತಿಸಲಾಗಿದ್ದು, ಸೋಮವಾರದಂದು ಆತನ ಶವ ಪತ್ತೆಯಾಗಿರುವ ಜವಾಹರ್ ನಗರ ಪ್ರದೇಶದ ಹಾಸ್ಟೆಲ್‌ನಲ್ಲಿ ತನ್ನ ತಾಯಿಯೊಂದಿಗೆ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ, ಎಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶಕ್ಕಾಗಿ ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ರಸ್ತೋಗಿ ದಾಖಲಾಗಿದ್ದರು ಮತ್ತು ಹಾಸ್ಟೆಲ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು ಎಂದು ಅವರು ಹೇಳಿದರು.

ಸೋಮವಾರ ಬೆಳಿಗ್ಗೆ, ಆತ ಎಂದಿನಂತೆ ಎದ್ದ ನಂತರ ಫ್ರೆಶ್ ಆಗಲು ಸ್ನಾನಗೃಹಕ್ಕೆ ಹೋಗಿದ್ದ. ಅಲ್ಲೇ ಆತನ ಶವ ಪತ್ತೆಯಾಗಿದೆ ಎಂದು ಡಿಎಸ್ಪಿ ರಾಜೇಶ್ ಟೇಲರ್ ತಿಳಿಸಿದ್ದಾರೆ.

15-20 ನಿಮಿಷಗಳ ನಂತರವೂ ಹುಡುಗ ಹೊರಗೆ ಬರದಿದ್ದಾಗ, ಅಲ್ಲಿದ್ದವರು ಸ್ನಾನಗೃಹದ ಬಾಗಿಲನ್ನು ಬಡಿದರು ಮತ್ತು ಅದರ ಬೋಲ್ಟ್ ಮಾಡದೆ ತನ್ನ ಮಗ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ಕಂಡು, ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರಿಗೆ ಸಿಪಿಆರ್ ನೀಡಿದರು ಆದರೆ ಅಷ್ಟರಾಗಲೇ ಆತ ಸಾವನ್ನಪ್ಪಿದ್ದ. ಮೃತನ ಪೋಷಕರು ಮರಣೋತ್ತರ ಪರೀಕ್ಷೆಯನ್ನು ನಿರಾಕರಿಸಿದರ. ಆದ್ದರಿಂದ ಈ ವಿಷಯದಲ್ಲಿ ಯಾವುದೇ ಪ್ರಕರಣವನ್ನು ದಾಖಲಿಸದೆ ದೇಹವನ್ನು ಅವರಿಗೆ ಹಸ್ತಾಂತರಿಸಲಾಯಿತು ಎಂದು ಶರ್ಮಾ ಹೇಳಿದರು.