Raja Yoga : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳಲ್ಲಿನ ಅಸಮತೋಲನದಿಂದ ಗ್ರಹಗಳು ಒಟ್ಟಿಗೆ ಸೇರಿದಾಗ ಕೆಲವು ಯೋಗಗಳು ರೂಪುಗೊಳ್ಳುತ್ತವೆ ಎಂದು ನಂಬಲಾಗಿದೆ. ಈ ರೀತಿಯಾಗಿ ರೂಪುಗೊಳ್ಳುವ ಅಪರೂಪದ ಯೋಗಗಳ ಪ್ರಭಾವವು ಎಲ್ಲ 12 ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಸೌರ ಮಂಡಲದಲ್ಲಿರುವ ಎಲ್ಲ ಗ್ರಹಗಳಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಮಹತ್ವವಿದೆ. ಪ್ರಸ್ತುತ ಮಂಗಳ ಗ್ರಹವು ಕುಲದೀಪಕ ರಾಜಯೋಗವನ್ನು ಸೃಷ್ಟಿಸಿದ್ದು, ಮೂರು ರಾಶಿಚಕ್ರ ಚಿಹ್ನೆಗಳು ಶ್ರೀಮಂತ ಯೋಗವನ್ನು ಪಡೆಯುತ್ತವೆ ಎಂದು ಜ್ಯೋತಿಷ್ಯವು ಭವಿಷ್ಯ ನುಡಿದಿದೆ. ಗ್ರಹಗಳ ಅಧಿಪತಿಯಾದ ಮಂಗಳ ಗ್ರಹವು ಪ್ರಸ್ತುತ ತುಲಾ ರಾಶಿಯಲ್ಲಿದ್ದು, ಸೆಪ್ಟೆಂಬರ್ 28 ರಂದು ಕುಲದೀಪಕ ರಾಜಯೋಗ ಸೃಷ್ಟಿಯಾಗಿದೆ. ಈ ರಾಜಯೋಗವು ಮಂಗಳವು ಒಂದು ರಾಶಿಯ 10ನೇ ಮನೆಯಲ್ಲಿ ಅಥವಾ ತನ್ನದೇ ಆದ ರಾಶಿಯಲ್ಲಿದ್ದಾಗ ರೂಪುಗೊಳ್ಳುವ ಯೋಗವಾಗಿದೆ. ಇದರಿಂದ ಲಾಭ ಪಡೆಯುವ ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ನಾವೀಗ ತಿಳಿಯೋಣ.
ಮಕರ ರಾಶಿಯವರ ಹತ್ತನೇ ಮನೆಯಲ್ಲಿ ಮಂಗಳನ ಉಪಸ್ಥಿತಿಯು ಕುಲದೀಪಕ ರಾಜಯೋಗವನ್ನು ಸೃಷ್ಟಿಸುತ್ತದೆ. ಇದರಿಂದ ಕೆಲಸದ ಸ್ಥಳದಲ್ಲಿರುವ ದೀರ್ಘಕಾಲದ ಸಮಸ್ಯೆ ದೂರವಾಗುತ್ತದೆ. ಅಲ್ಲದೆ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಇನ್ನೂ ಮದುವೆ ಆಗದವರಿಗೆ ವಿವಾಹ ಯೋಗ ಕೂಡಿಬರಲಿದೆ. ನೀವು ನಿಮ್ಮ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುತ್ತೀರಿ. ಕೆಲಸದಲ್ಲಿ ನಿಮಗೆ ಸಂಬಳ ಹೆಚ್ಚಾಗುತ್ತದೆ.
ಮೇಷ ರಾಶಿಯವರಿಗೆ ಕುಲದೀಪಕ ರಾಜಯೋಗವು ಉತ್ತಮ ಲಾಭಗಳನ್ನು ತರುತ್ತದೆ. ಮೇಷ ರಾಶಿಯ ಅಧಿಪತಿ ಮಂಗಳ, ಏಳನೇ ಮನೆಯಲ್ಲಿ ಕುಳಿತಿದ್ದಾನೆ. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಅವಕಾಶ ಸಿಗುತ್ತದೆ. ಕೆಲಸದಲ್ಲಿ ಹೊರೆ ಕಡಿಮೆಯಾಗುತ್ತದೆ ಮತ್ತು ಒತ್ತಡ ನಿವಾರಣೆಯಾಗುತ್ತದೆ. ವ್ಯವಹಾರದಲ್ಲಿ ತೊಡಗಿರುವವರು ಉತ್ತಮ ಲಾಭವನ್ನು ನಿರೀಕ್ಷಿಸಬಹುದು ಮತ್ತು ಆರ್ಥಿಕ ಪರಿಸ್ಥಿತಿ ಅನಿರೀಕ್ಷಿತವಾಗಿ ಸುಧಾರಿಸುತ್ತದೆ.
ಕರ್ಕಾಟಕ ರಾಶಿಯವರಿಗೆ ಕುಲದೀಪಕ ರಾಜಯೋಗವು ತುಂಬಾ ಪ್ರಯೋಜನಕಾರಿಯಾಗಿದೆ. ಕರ್ಕಾಟಕದ ನಾಲ್ಕನೇ ಮನೆಯಲ್ಲಿ ಮಂಗಳನು ಸಾಗುತ್ತಿದ್ದಾನೆ. ನೀವು ಕೆಲಸದಲ್ಲಿ ಗಮನಾರ್ಹ ಬದಲಾವಣೆಯನ್ನು ಅನುಭವಿಸುವಿರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡಬಹುದು. ನೀವು ನಿಮಗಾಗಿ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಳ್ಳುವಿರಿ. ಅಲ್ಲದೆ, ನೀವು ಬಯಸಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.