ನವದೆಹಲಿ: ಕೇಂದ್ರ ಭಾರತ, ಪೂರ್ವ ಭಾರತ ಮತ್ತು ದಕ್ಷಿಣ ಪರ್ಯಾಯ ದ್ವೀಪದ ಹಲವು ಭಾಗಗಳಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಭಾರಿ ಗುಡುಗು ಸಹಿತ ಮಳೆ ಹಾಗೂ ಸಿಡಿಲಿನ ವಾತಾವರಣ ಉಂಟಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಮುನ್ಸೂಚನೆ ನೀಡಿದೆ.
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಕೂಡ ಇದರ ಪರಿಣಾಮ ಉಂಟಾಗಲಿದೆ. ಮೂರೂ ದಿನ ಉತ್ತರ ಕರ್ನಾಟಕದ ಒಳನಾಡು ಪ್ರದೇಶಗಳಲ್ಲಿ ಇದೇ ರೀತಿಯ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ. ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ ಮತ್ತು ಮರಾಠವಾಡಾದಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗಲಿದೆ. ಆಲಿಕಲ್ಲು ಮಳೆಯೂ ಬೀಳಬಹುದು. ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಮಧ್ಯ ಮಹಾರಾಷ್ಟ್ರ ಮೊದಲಾದೆಡೆ ಗುಡುಗು ಸಹಿತ ಮಳೆಯ ಆರ್ಭಟ ಇರುತ್ತದೆ ಎಂದು ಐಎಂಡಿ ಹೇಳಿದೆ. ಇದನ್ನೂ ಓದಿರಿ ರಾಮಮಂದಿರ ನಿರ್ಮಾಣಕ್ಕೆ ಹಣ ಕೊಡದವರ ಮನೆಗಳ ಗುರುತು: ಮಾಜಿ ಸಿಎಂ ಎಚ್ಡಿಕೆ ಆತಂಕ