ನ್ಯೂಸ್

ರೈಲಿನ ಬೋಗಿಗಳ ನಡುವೆ ಸಿಲುಕಿ ರೈಲ್ವೆ ಸಿಬ್ಬಂದಿ ಸಾವು | Railway

ಬಿಹಾರ: ರೈಲಿನ (Railway ) ಇಂಜಿನ್ ಮತ್ತು ಬೋಗಿಗಳ ನಡುವೆ ಷಂಟಿಂಗ್(Shunting Operation) ಕಾರ್ಯಾಚರಣೆ​ ವೇಳೆ ರೈಲ್ವೆ ಸಿಬ್ಬಂದಿ ಮೃತಪಟ್ಟಿರುವ ಘಟನೆ ಇಲ್ಲಿನ ಬೇಗುಸ್​ರಾಯ್​ ಜಿಲ್ಲೆಯ ಬರೌನಿ ಜಂಕ್ಷನ್​ನಲ್ಲಿ ಶನಿವಾರ(ನ.09)ನಡೆದಿದೆ.

ಅಮರ್​ ಕುಮಾರ್ ರಾವುತ್​ (35) ಮೃತ ವ್ಯಕ್ತಿ. ಲಕ್ನೋ-ಬರೌನಿ ಎಕ್ಸ್​ಪ್ರೆಸ್​ (ಟ್ರೈನ್​ ಸಂಖ್ಯೆ:15204) ಸ್ಟೇಷನ್​ಗೆ ಬಂದು ನಿಂತಿದೆ. ಕೊನೆಯ ನಿಲ್ದಾಣ ಇದು ಆಗಿದೆ. ಹೀಗಾಗಿ, ಎಂಜಿನ್​ ಷಂಟಿಂಗ್ ಮಾಡುತ್ತಿದ್ದಾಗ ಮಧ್ಯೆ ಸಿಲುಕಿ ಸಾವನಪ್ಪಿದ್ದಾನೆ.

ಡಿಕೌಪ್ಲಿಂಗ್ ಪ್ರಕ್ರಿಯೆಯ ನಡೆಯುತ್ತಿರುವಾಗ ರೈಲು ಚಾಲಕ ಅನಿರೀಕ್ಷಿತವಾಗಿ ಎಂಜಿನ್ ಅನ್ನು ಹಿಮ್ಮುಖವಾಗಿ ಚಾಲನೆ ಮಾಡಿದ್ದಾನೆ. ಇದರ ಪರಿಣಾಮವಾಗಿ ಅಮರ್ ಸಿಕ್ಕಿಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ರೈಲ್ವೇ ಚಾಲಕ, ಘಟನೆ ತಿಳಿಯುತ್ತಿದ್ದಂತೆ ಪರಾರಿಯಾಗಿದ್ದಾನೆ.

ಘಟನೆಯ ಬಗ್ಗೆ ಎಚ್ಚೆತ್ತ ಸೋನ್​ಪುರ್​ ವಿಭಾಗೀಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)