ಅಮೃತಸರ್: ಪಂಜಾಬ್ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ಗೆ ಸೇವೆಯ ಉದ್ದೇಶದಿಂದ ಭೇಟಿ ಕೊಟ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಇತರರೊಡನೆ ಸೇರಿ ತರಕಾರಿ ಕತ್ತರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ಆನ್ಲೈನ್ ಕಾರ್ಮಿಕರಿಗೆ ಸಿಹಿ ಸುದ್ದಿ, ಸಾಮಾಜಿಕ ಭದ್ರತೆಗಾಗಿ ಸರ್ಕಾರದಿಂದ ಯೋಜನೆ, ಸಚಿವ ಸಂತೋಷ ಲಾಡ್ ಹೇಳಿದ್ದೇನು?
ಒಂದು ದಿನದ ಮಟ್ಟಿಗೆ ಅಮೃತಸರಕ್ಕೆ ಆಗಮಿಸಿರುವ ರಾಹುಲ್, ವೈಯಕ್ತಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿಂದ ಭೇಟಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಗುರ್ಬಾನಿ ಕೀರ್ತನೆಯನ್ನು ಕೇಳಿದ ನಂತರ ಸ್ಥಳೀಯರೊಡನೆ ದೇವಸ್ಥಾನದ ಕೆಲಸಗಳನ್ನು ಮಾಡಿದ್ದಾರೆ.
ಗಮನಾರ್ಹವಾಗಿ ದೇವಾಲಯದ ಆವರಣದಲ್ಲಿ ಸೇವೆಯ ಭಾಗವಾಗಿ ತರಕಾರಿಗಳನ್ನು ಕತ್ತರಿಸಿದರು. ಹೆಚ್ಚಿನ ಸಮಯದವರೆಗೂ ನೀರು ಹಂಚಿದ ರಾಹುಲ್, ಪಾತ್ರೆಗಳನ್ನು ತೊಳೆದು ಇತರೆ ಕೆಲಸಗಳನ್ನು ಮಾಡುವ ಮುಖೇನ ದೇವಾಯಲಯದ ಕಾರ್ಯಗಳನ್ನು ಮಾಡಿದ್ದಾರೆ.(ಏಜೆನ್ಸೀಸ್).