ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅರವಿಂದ್ ಕೇಜ್ರಿವಾಲ್ ಅವರ ಭರವಸೆಗಳನ್ನು ಲೇವಡಿ ಮಾಡಿದ್ದಾರೆ. ದೆಹಲಿಯನ್ನು ಪ್ಯಾರಿಸ್ ಮತ್ತು ಲಂಡನ್‌ನಂತೆ ಸುಂದರಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನು ಓದಿ: ಭಾರತದ ಸಂಸತ್ತಿನಲ್ಲಿ ಮಾರ್ಕ್ ಜುಕರ್ಬರ್ಗ್ ಕ್ಷಮೆಯಾಚಿಸಬೇಕು; ನಿಶಿಕಾಂತ್ ದುಬೆ ಹೀಗೆಳಿದ್ದೇಕೆ? |Mark Zuckerberg
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಎರ. ಆ ವಿಡಿಯೋದಲ್ಲಿ "ಇದು ಅರವಿಂದ್ ಕೇಜ್ರಿವಾಲ್ ಅವರ 'ಹೊಳೆಯುತ್ತಿರುವ ದೆಹಲಿ, ಪ್ಯಾರಿಸ್ ವಾಲಿ ದೆಹಲಿ. ಎಲ್ಲ ಕಡೆಯೂ ಇದೇ ಸ್ಥಿತಿ ಇದೆ ಎಂದು ಬರೆದಿದ್ದಾರೆ.
ಸೀಲಂಪುರದಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದಾಗಿನಿಂದ ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ನಡುವೆ ಮಾತಿನ ಸಮರ ಪ್ರಾರಂಭವಾಗಿದೆ. "ಅರವಿಂದ್ ಕೇಜ್ರಿವಾಲ್ ಅವರು ಭ್ರಷ್ಟಾಚಾರವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದ್ದಾರೆ, ಮೋದಿಯವರು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಭ್ರಷ್ಟಾಚಾರವನ್ನು ತೊಡೆದುಹಾಕಿದರು. ಕೇಜ್ರಿವಾಲ್ ಕೂಡ ಅದೇ ತಂತ್ರವನ್ನು ಅನುಸರಿಸುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಹೇಳಿದ್ದರು.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ರಾಜಧಾನಿಯ ಎಲ್ಲಾ ಏಳು ಸ್ಥಾನಗಳನ್ನು ಎಎಪಿ ಗೆದ್ದರೆ, ದೆಹಲಿಯನ್ನು ಇತರ ರಾಜಧಾನಿಗಳಂತೆ ಸುಂದರವಾಗಿಸುತ್ತದೆ ಎಂದು ಹೇಳಿದ್ದರು. ಈ ವೇಳೆ ಕೇಜ್ರಿವಾಲ್ ಅವರು, ''ದೆಹಲಿಯಲ್ಲಿ ಎಲ್ಲೆಂದರಲ್ಲಿ ಕೊಳಕು, ಕಸ ಕಾಣುತ್ತಿದೆ. ದೆಹಲಿಯ ಅನೇಕ ಜನರು ವಿದೇಶ ಪ್ರವಾಸಕ್ಕೆ ಹೋಗಿರಬಹುದು. ಇತರ ದೇಶಗಳ ರಾಜಧಾನಿಗಳ ಉದಾಹರಣೆಯನ್ನು ತೆಗೆದುಕೊಳ್ಳಿ. ಪ್ಯಾರಿಸ್, ಲಂಡನ್, ವಾಷಿಂಗ್ಟನ್, ಟೋಕಿಯೊ ಮತ್ತು ಇತರವು ಅಭಿವೃದ್ಧಿ ಹೊಂದಿದ ದೇಶಗಳ ರಾಜಧಾನಿಗಳು ಬಹಳ ಸುಂದರವಾಗಿವೆ ಎಂದಿದ್ದರು.
ನಾವು ದೆಹಲಿಯನ್ನು ಎಷ್ಟು ಸುಂದರವಾಗಿ ಮಾಡಬಹುದು, ನಾವು ದೆಹಲಿಯ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ಸುಧಾರಿಸಬಹುದು. ಇಡೀ ನಗರವನ್ನು ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಸಂಪರ್ಕಿಸಿದರೆ, ನಾವು ದೆಹಲಿಯನ್ನು ಕೊಳೆ ಮತ್ತು ಕಸದಿಂದ ಮುಕ್ತಗೊಳಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದರು.(ಏಜೆನ್ಸೀಸ್)