ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ 3.0ರ ಮೊದಲ ಪೂರ್ಣಾವಧಿಯ ಸಾಮಾನ್ಯ ಬಜೆಟ್ ಅನ್ನು ಸಂಸತ್ತಿನಲ್ಲಿ ಶನಿವಾರ (ಫೆಬ್ರವರಿ 1) ಮಂಡಿಸಲಾಗಿದೆ. ಈ ಹಿಂದೆ ಆರು ಪೂರ್ಣಾವಧಿ ಮತ್ತು ಎರಡು ಮಧ್ಯಂತರ ಬಜೆಟ್‌ಗಳನ್ನು ಮಂಡಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್(Budget 2025) ಭಾಷಣವನ್ನು ಮಾಡಿದರು. ಕೇಂದ್ರದ ಬಜೆಟ್ ಅನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
2025-26ನೇ ಆರ್ಥಿಕ ವರ್ಷಕ್ಕೆ ಮಂಡಿಸಿದ ಸಾಮಾನ್ಯ ಬಜೆಟ್‌ನಲ್ಲಿ, ಇಂದು ದೇಶವು 'ಅಭಿವೃದ್ಧಿಯೂ, ಪರಂಪರೆಯೂ' ಎಂಬ ಮಂತ್ರದೊಂದಿಗೆ ನಡೆಯುತ್ತಿದ್ದು, ಈ ಬಜೆಟ್‌ನಲ್ಲಿ ಇದಕ್ಕಾಗಿ ಬಹಳ ಮುಖ್ಯ ಮತ್ತು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಬಜೆಟ್ ಕುರಿತ ತಮ್ಮ ಅಭಿಪ್ರಾಯವನ್ನು ಹೇಳಿದರು. ಬಜೆಟ್‌ನಲ್ಲಿನ ಹೊಸ ತೆರಿಗೆ ವ್ಯವಸ್ಥೆಯಲ್ಲಿ 12 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯವನ್ನು ತೆರಿಗೆಯಿಂದ ವಿನಾಯಿತಿ ಇರಿಸಲಾಗಿದೆ.
ಆದರೆ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಬಜೆಟ್‌ನಲ್ಲಿ ಏನೂ ಇಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ವಾಸ್ತವವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಬಜೆಟ್ ಕುರಿತು ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಬುಲೆಟ್ ಗಾಯಕ್ಕೆ ಬ್ಯಾಂಡೇಜ್ ಹಾಕಲಾಗಿದೆ. ಜಾಗತಿಕ ಅನಿಶ್ಚಿತತೆಯ ಮಧ್ಯೆ ನಮ್ಮ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ದೊಡ್ಡ ಬದಲಾವಣೆಗಳ ಅಗತ್ಯವಿದೆ. ಆದರೆ ವಿಚಾರಗಳ ವಿಷಯದಲ್ಲಿ ಈ ಸರ್ಕಾರ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಬಜೆಟ್‌ನಲ್ಲಿ ಅಭಿವೃದ್ಧಿಯ ನಾಲ್ಕು ಎಂಜಿನ್‌ಗಳ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬಜೆಟ್ ಸಂಪೂರ್ಣ ಹಳಿತಪ್ಪಿದೆ ಎಂದು ಆರೋಪಿಸಿದೆ.ಕೃಷಿ, ಎಂಎಸ್‌ಎಂಇ (ಸೂಕ್ಷ್ಮ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು), ಹೂಡಿಕೆ ಮತ್ತು ರಫ್ತುಗಳು ಬೆಳವಣಿಗೆಯ ನಾಲ್ಕು ಶಕ್ತಿಶಾಲಿ ಎಂಜಿನ್‌ಗಳಾಗಿವೆ ಎಂದು ಸೀತಾರಾಮನ್ ಶನಿವಾರ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.(ಏಜೆನ್ಸೀಸ್)