ನ್ಯೂಸ್

ಆಜಾನ್‌ ವೇಳೆ ಭಾಷಣ ನಿಲ್ಲಿಸಿ ಗೌರವ ತೋರಿದ ರಾಹುಲ್ ಗಾಂಧಿ!

ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಆಜಾನ್‌ ಕೂಗಿದ ಹಿನ್ನೆಲೆ, ಕೆಲ ಕಾಲ ಭಾಷಣ ನಿಲ್ಲಿಸಿ ಆಜಾನ್‌ ಮುಗಿದ ಬಳಿಕ ಭಾಷಣ ಮುಂದುವರಿಸಿದ್ದಾರೆ.

ತುರುವೇಕೆರೆಯ ಗುರುಭವನ ಮೈದಾನದಲ್ಲಿ ಕಾಂಗ್ರೆಸ್​​ ಕಾರ್ಯಕ್ರಮ‌ ನಡೆಯುತ್ತಿತ್ತು. ರಾಹುಲ್ ಗಾಂಧಿ ಭಾಷಣದ ಮಧ್ಯೆ ಮಸೀದಿಯಲ್ಲಿ ಆಜಾನ್‌ ಕೂಗಿದ ಪರಿಣಾಮ ಕೆಲವು ಕಾಲ ಭಾಷಣ ನಿಲ್ಲಿಸಿ ಮುಂದುವರೆಸಿದ್ದಾರೆ.

ಕೈ ಅಭ್ಯರ್ಥಿ ಬೆಮೆಲ್ ಕಾಂತರಾಜು ಪರ ಚುನಾವಣಾ ಭಾಷಣ ಮಾಡುವ ವೇಳೆ ಮಸೀದಿಯಿಂದ ನಮಾಜ್ ಪ್ರಾರ್ಥನೆ ಕೇಳುತ್ತಿದಂತೆ ಭಾಷಣ ನಿಲ್ಲಿಸಿದರು. ನಮಾಜ್ ಮುಗಿದ ಬಳಿಕ ರಾಹುಲ್ ಗಾಂಧಿ ಭಾಷಣ ಮುಂದುವರೆಸಿದ ಪ್ರಸಂಗ ನಡೆಯಿತು.

ಈ ಹಿಂದೆ ಮಂಗಳೂರಿಗೆ ಆಗಮಿಸಿದ್ದ ವೇಳೆ ರಾಹುಲ್ ಗಾಂಧಿ, ಅಡ್ಯಾರು ಬಳಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರು. ಭಾಷಣದ ವೇಳೆ ಆಜಾನ್‌ ಕೂಗಿದ ಹಿನ್ನೆಲೆ.. ಕೆಲ ಕಾಲ ಭಾಷಣ ನಿಲ್ಲಿಸಿ, ಆಜಾನ್‌ ಮುಗಿದ ಬಳಿಕ ಭಾಷಣ ಮುಂದುವರಿಸುವ ಮೂಲಕವಾಗಿ ಈ ಹಿಂದೆ ಸುದ್ದಿಯಾಗಿದ್ದರು.