ಕೇರಳ: ಚುನಾವಣೆಯ ನಿರೀಕ್ಷೆಯಲ್ಲಿರುವ ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಮುದ್ರಕ್ಕೆ ಜಿಗಿದು ಅಚ್ಚರಿ ಮೂಡಿಸಿದ್ದಲ್ಲದೆ, ಸ್ವತಃ ಖುಷಿಯನ್ನೂ ಅನುಭವಿಸಿದ್ದಾರೆ. ಮೀನುಗಾರರೊಂದಿಗೆ ಬಲೆ ಹಾಕುವ ಪ್ರಕ್ರಿಯೆಯನ್ನು ಅನುಭವಿಸಲು ತೆರಳಿದ್ದ ಅವರು ಅವರೊಂದಿಗೆ ಸಮುದ್ರಕ್ಕೂ ಜಿಗಿದು ಸಂತೋಷ ಪಟ್ಟಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪ್ರವಾಸದಲ್ಲಿ ರಾಹುಲ್ ಗಾಂಧಿ, ಮೀನುಗಾರರೊಂದಿಗೆ ಸುಮಾರು ಹತ್ತು ನಿಮಿಷಗಳ ನೀರಿನಲ್ಲಿ ಈಜಾಡಿ ಸಂತೋಷ ಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮುಖಂಡರು ತಿಳಿಸಿದ್ದಾರೆ. ಕೆಲವು ಮೀನುಗಾರರು ಬಲೆ ಎಸೆದು ನೀರಿಗೆ ಧುಮುಕಿ ಬಲೆಯನ್ನು ಹೊಂದಾಣಿಕೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬೋಟ್ನಿಂದ ಜಿಗಿದ ರಾಹುಲ್ ಗಾಂಧಿ ಕೂಡ ಸಮುದ್ರಕ್ಕೆ ಧುಮುಕಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಟಿ.ಎನ್.ಪ್ರತಾಪನ್ ಸೇರಿ ನಾಲ್ವರು ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಜತೆಗಿದ್ದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ