ನ್ಯೂಸ್

ರೋಡ್​ ಶೋ ನಡೆಸಿ ರೆಸಾರ್ಟ್​ಗೆ ತೆರಳಿದ ರಾಹುಲ್​ ಗಾಂಧಿ! ಜತೆಗೆ ಯಾರೆಲ್ಲಾ ಇದ್ರು?

ವಿಜಯಪುರ: ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ನಿನ್ನೆಯಿಂದ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿನ್ನೆ ಸಾಯಂಕಾಲ 5 ಗಂಟೆಯಿಂದ‌ 6-30 ರವರೆಗೆ ನಗರದಲ್ಲಿ ರೋಡ್ ಶೋ ನಡೆಸಿದ್ದ ರಾಹುಲ್​ ಗಾಂಧಿ, ಬಳಿಕ ನಗರದ ಸ್ಫೂರ್ತಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಸ್ಫೂರ್ತಿ ರೆಸಾರ್ಟ್​ನಲ್ಲಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಜತೆ ತಡ ರಾತ್ರಿವರೆಗೂ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ. ರಾಹುಲ್ ಗಾಂಧಿ ನೆಲೆಸಿರುವ ಸ್ಪೂರ್ತಿ ರಿಸಾರ್ಟ್ ನಲ್ಲಿ ಭಾರಿ ಬಿಗಿ ಭದ್ರತೆ ರೂಪಿಸಲಾಗಿದೆ.

ಈ ಸಭೆಯಲ್ಲಿ ಇದ್ದವರು ಯಾರು?

ಈ ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಶಾಸಕರಾದ ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್, ಮಾಜಿ ಶಾಸಕ ಸಿ ಎಸ್ ನಾಡಗೌಡ ಸೇರಿದಂತೆ ಇತರ ಕ್ಷೇತ್ರಗಳ ಅಭ್ಯರ್ಥಿಗಳು ಸಭೆಯಲ್ಲಿ ಭಾಗಿಯಾಗಿದ್ದು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲಲು ರಾಹುಲ್​ ಗಾಂಧಿ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಲಿಂಗಾಯತರನ್ನು ಸೆಳೆಯಲು ರಾಹುಲ್​ ಗಾಂಧಿ ಸಲಹೆ-ಸೂಚನೆ

ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ಮಾಹಿತಿ ಸಂಗ್ರಹ ಮಾಡಲಾಗಿದ್ದು ಹೆಚ್ಚು ಲಿಂಗಾಯತ ಮತಗಳನ್ನು ಕಾಂಗ್ರೆಸ್ ನತ್ತ ಸೆಳೆಯುವಂತೆ ರಣತಂತ್ರ ರೂಪಿಸಲು ರಾಹುಲ್​ ಗಾಂಧಿ ಕರೆ ನೀಡಿದ್ದಾರೆ. ಬಿಜೆಪಿಯನ್ನು ಕಟ್ಟಿ ಹಾಕಲು ರಾಹುಲ್​ ಗಾಂಧಿ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.