ನ್ಯೂಸ್

ಕಾಂಗ್ರೆಸ್​ ಪಕ್ಷದ ಯುವ ಸಂಸದೆಯನ್ನು ಮದುವೆಯಾಗಲಿದ್ದಾರೆ ರಾಗಾ; ವೈರಲ್​ ಆಗುತ್ತಿದೆ ಇವರಿಬ್ಬರ ಫೋಟೋಸ್​

ನವದೆಹಲಿ: ಸಲ್ಮಾನ್​ ಖಾನ್​ ಬಾಲಿವುಡ್​ನ ದಿ ಮೋಸ್ಟ್​ ಎಲಿಜಿಬಿಲ್​ ಬ್ಯಾಚುಲರ್​ ಎಂದರೆ ತಪ್ಪಾಗಲಾರದು. 58 ವರ್ಷವಾದರೂ ಈಗಲೂ ಫಿಟ್​ ಆಗಿರುವ ಸಲ್ಮಾನ್​ ಯಾವುದಾದರೂ ಒಂದು ಕಾರಣಕ್ಕೆ ಸುದ್ದಿಯಾಗುತ್ತಾರೆ ಎಂದರೆ ಅದು ಮದುವೆಯ ವಿಚಾರಕ್ಕೆ. ಬಾಲಿವುಡ್​ನಲ್ಲಿ ಚಿತ್ರದ ಹೊರತಾಗಿ ಮದುವೆಯ ಕಾರಣಕ್ಕೆ ಸಲ್ಮಾನ್​ ಹೇಗೆ ಸುದ್ದಿಯಾಗುತ್ತಾರೋ ಅದೇ ರೀತಿ ರಾಜಕೀಯ ವಲಯದಲ್ಲಿ ರಾಹುಲ್​ ಗಾಂಧಿ ಕೂಡ ಈ ಒಂದು ಕಾರಣಕ್ಕೆ ಆಗಿಂದಾಗೆ ಸೌಂಡ್​ ಮಾಡುತ್ತಿರುತ್ತಾರೆ.

ಸಲ್ಮಾನ್​ ಖಾನ್​ ಹೊರತಾಗಿ ರಾಹುಲ್​ ಗಾಂಧಿ ಕೂಡ ಮದುವೆಯ ವಿಚಾರವಾಗಿ ಆಗಿಂದಾಗೆ ಸೌಂಡ್​ ಮಾಡುತ್ತಿರುತ್ತಾರೆ. ಕೆಲವರ ಹೆಸರು ಕೂಡ ರಾಹುಲ್​ ಜೊತೆ ಆಗಿಂದಾಗೆ ಕೇಳಿ ಬರುತ್ತಿರುತ್ತದೆ. ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಈ ಕುರಿತು ಮಾತನಾಡಿದ್ದ ರಾಹುಲ್​ ತಾವು ಈ ವಿಚಾರವನ್ನು ಹೇಗೆ ಅವಾಯ್ಡ್​ ಮಾಡುತ್ತಿದ್ದಾರೆ ಮತ್ತು ಅದನ್ನು ಮುಂದುವರೆಸುವುದಾಗಿ ಹೇಳಿದ್ದರು. ಇದೀಗ ರಾಹುಲ್​ ಗಾಂಧಿ ಕಾಂಗ್ರೆಸ್​ ಸಂಸದೆಯನ್ನು ಮದುವೆಯಾಗಲಿದ್ದಾರೆ ಎಂದು ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ತಮ್ಮ ಪಕ್ಷದ ಸಂಸದೆ, ಮಹಾರಾಷ್ಟ್ರ ಮೂಲದ ಪ್ರಣಿತಿ ಶಿಂಧೆ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಇವರಿಬ್ಬರು ಜತೆಯಾಗಿ ತೆಗೆಸಿಕೊಂಡಿರುವ ಫೋಟೋ ಈ ಊಹಾಪೋಹಗಳನ್ನು ಹುಟ್ಟು ಹಾಕಿದೆ. ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ಒಂದರಲ್ಲಿ ಲಾಲು ಪ್ರಸಾದ್​ ಯಾದವ್​ ಕೂಡ ರಾಹುಲ್​ ಮದುವೆ ಬಗ್ಗೆ ಮಾತನಾಡುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿರುವ ವದಂತಿಗಳ ನಡುವೆಯೇ ರಾಹುಲ್ ಗಾಂಧಿ ಅಥವಾ ಪ್ರಣಿತಿ ಶಿಂಧೆ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.