ನವದೆಹಲಿ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನೆರೆರಾಷ್ಟ್ರಗಳ ಜತೆಗೆ ಬೆಳೆಸಿಕೊಂಡಿದ್ದ ಸಂಬಂಧವನ್ನು ಪ್ರಧಾನಿ ನರೇಂದ್ರ ಮೋದಿ ಹಾಳುಗೆಡವುತ್ತಿದ್ದಾರೆ. ಅನೇಕ ದಶಕಗಳ ಪ್ರಯತ್ನದ ಫಲವಾಗಿ ರೂಪುಗೊಂಡ ಸಂಬಂಧವಾಗಿತ್ತು ಅದು. ಬಹಳ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದ ಎಕನಾಮಿಸ್ಟ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯ ಇಮೇಜ್ ಅನ್ನು ಟ್ಯಾಗ್ ಮಾಡಿದ ರಾಹುಲ್ ಗಾಂಧಿ, ನೆರೆಹೊರೆಯಲ್ಲಿ ಸ್ನೇಹಿತರಿಲ್ಲದೇ ಬದುಕುಸಾಗಿಸುವುದು ಅಪಾಯಕಾರಿ ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಜತೆಗಿನ ಸಂಬಂಧವನ್ನು ಬಾಂಗ್ಲಾದೇಶ ಕಡಿಮೆ ಮಾಡಿದ್ದು, ಚೀನಾದೊಂದಿಗಿನ ಸಂಬಂಧ ದೃಢವಾಗುತ್ತಿದೆ ಎಂಬ ದ ಎಕನಾಮಿಸ್ಟ್ ವರದಿಯ ಶೀರ್ಷಿಕೆ ಅದರಲ್ಲಿದೆ.
ಇದನ್ನೂ ಓದಿ: ವಿದ್ಯಾರ್ಥಿಗೆ ಸುಖ ಇಲ್ಲ; ಸುಖಾರ್ಥಿಗೆ ವಿದ್ಯೆ ಇಲ್ಲ!
ಬಾಂಗ್ಲಾದೇಶ ಒಂದುಕಾಲದಲ್ಲಿ ಭಾರತದ ಆಪ್ತ ರಾಷ್ಟ್ರವಾಗಿತ್ತು. ಆದರೆ ಈಗ ಈ ಸ್ನೇಹ ಸಂಬಂಧ ಸಡಿಲಗೊಳ್ಳುತ್ತ ಸಾಗಿದ್ದು, ಚೀನಾದ ಜತೆಗಿನ ಸಂಬಂಧ ಗಟ್ಟಿಯಾಗುತ್ತಿದೆ ಎಂಬರ್ಥದ ಲೇಖನ ಎಕನಾಮಿಸ್ಟ್ ಪ್ರಕಟಿಸಿದೆ. ಇದನ್ನು ಇಟ್ಟುಕೊಂಡು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿನ ಸಂದರ್ಭ ನೆನಪಿಸಿಕೊಂಡು ಮೇಲಿನಂತೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)