ನ್ಯೂಸ್

ಮೈಚಳಿ ಬಿಟ್ಟು ಈಜುಗೊಳದಲ್ಲಿ ಫೋಟೋಶೂಟ್ ಮಾಡಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ಬೆಂಗಳೂರು: ಸ್ಯಾಂಡಲ್​ವುಡ್​​ ನಟಿ ರಾಗಿಣಿ ದ್ವಿವೇದಿ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆಗೆಡಿಸುತ್ತಾರೆ. ಆದರೆ ಇಂದು ಹಂಚಿಕೊಂಡಿರುವ ಫೋಟೋಗಳು ಸಖತ್​ ವೈರಲ್​​ ಆಗಿವೆ.

ರಾಗಿಣಿ ದ್ವಿವೇದಿ ಬಿಕಿನಿ ತೊಟ್ಟು ಈಜುಗೊಳದಲ್ಲಿಯೇ ಇಳಿದು ಫೋಟೋಶೂಟ್ ಮಾಡಿಸಿದ್ದಾರೆ. ಈಜುಗೊಳದಲ್ಲಿ ಇಳಿದು ವಿವಿಧ ಹಾವ-ಭಾವಗಳಲ್ಲಿಯೇ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಮೆಚ್ಚುಗೆ ಸೂಚಿಸಿ ನಟಿಯ ಬೋಲ್ಡ್‌ ಫೋಟೋಗಳಿಗೆ ಕೆಲವರು ಪಾಸಿಟಿವ್‌ ಮತ್ತು ನೆಗೆಟಿವ್‌ ರೀತಿಯಲ್ಲಿ ಕಮೆಂಟ್‌ ಹಾಕುತ್ತಿದ್ದಾರೆ.

ರಾಗಿಣಿ ದ್ವಿವೇದಿ ಸದ್ಯ ವೃಷಭ ಸಿನಿಮಾ ಒಪ್ಪಿದ್ದಾರೆ. ಮೋಹನ್ ಲಾಲ್ ಜೊತೆಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈಸೂರಿನಲ್ಲಿ ಈ ಚಿತ್ರದ 25 ದಿನಗಳ ಚಿತ್ರೀಕರಣ ಆಗಿದೆ. ರಾಗಿಣಿ ದ್ವಿವೇದಿ ಒಪ್ಪಿರೋ ಈ ಚಿತ್ರದ ಪ್ಯಾನ್ ಇಂಡಿಯಾ ಚಿತ್ರವೇ ಆಗಿದೆ. ಮಲೆಯಾಳಂ ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಆ ಬಳಿಕವೇ ಈ ಚಿತ್ರ ಇತರ ಭಾಷೆಗೆ ಡಬ್ಬಿಂಗ್ ಆಗಿ ರಿಲೀಸ್ ಆಗುತ್ತಿದೆ.ರಾಗಿಣಿ ದ್ವಿವೇದಿ ಅಭಿನಯದ ಶೀಲಾ ಸಿನಿಮಾ ಇತ್ತೀಚಿಗೆ ರಿಲೀಸ್ ಆಗಿದೆ. ಈ ಚಿತ್ರ ಎರಡು ಭಾಷೆಯಲ್ಲಿ ರಿಲೀಸ್ ಆಗಿತ್ತು. ಮೊದಲು ಮಲೆಯಾಳಂ ಭಾಷೆಯಲ್ಲಿ ತೆರೆಕಂಡಿತ್ತು.

ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂ, ಹಿಂದಿ ಸೇರಿ ಹಲವು ಚಿತ್ರಗಳಲ್ಲಿ ರಾಗಿಣಿ ಬಿಜಿಯಾಗಿದ್ದಾರೆ. ರಾಗಿಣಿ ಹೊಸ ಚಿತ್ರಗಳ ಪಟ್ಟಿ ದೊಡ್ಡದಿದೆ. ಅವುಗಳಲ್ಲಿ ಕೆಲವು ರಿಲೀಸ್ ಆಗಬೇಕಿದೆ. ಇನ್ನು ಕೆಲವು ಚಿತ್ರೀಕರಣದ ಹಂತದಲ್ಲಿಯೇ ಇವೆ.