ನ್ಯೂಸ್

ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೆ ರಾಗಿಣಿ ಗಿಫ್ಟ್​ ... 150 ಜನರಿಗೆ ಮನೆಯಲ್ಲಿ ಅಡುಗೆ ತಯಾರಿಸಿದ ‘ತುಪ್ಪದ ಹುಡುಗಿ’

ಲಾಕ್‌ಡೌನ್‌ನಿಂದ ಪರದಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಸಹಾಯಕ್ಕೆ ಹಲವರು ನಿಂತಿದ್ದಾರೆ. ಇದೀಗ ರಾಗಿಣಿ ಸಹ ವೈದ್ಯಕೀಯ ಸಿಬ್ಬಂದಿಯ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ.

ಮಂಗಳವಾರ ರಾಗಿಣಿ ತಮ್ಮ ಕುಟುಂಬದವರು ಜತೆಗೆ ಸೇರಿ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಆಹಾರ ತಯಾರಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು ಇತರರು ಸೇರಿದಂತೆ 150ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಇದ್ದು, ಅವರಿಗೆ ಮನೆಯಲ್ಲೇ ಅಡುಗೆ ಮಾಡಿ ಅಭಿಮಾನಿಗಳ ಮೂಲಕ ಕಳುಹಿಸಿದ್ದಾರೆ.

ಅಡುಗೆ ತಯಾರಿಸುತ್ತಿರುವ ಮತ್ತು ಪ್ಯಾಕ್ ಮಾಡುತ್ತಿರುವ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರುವ ರಾಗಿಣಿ, ‘ನಮ್ಮ ಕಡೆಯಿಂದ ಒಂದು ಸಣ್ಣ ಕೆಲಸ ಪ್ರೀತಿಯಿಂದ ಮಾಡುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.