ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಎಂದರೆ ಇಡೀ ಕರ್ನಾಟಕದ ಅಭಿಮಾನಿಗಳು ಸೇರಿದಂತೆ ಕುಟುಂಬಕ್ಕೆ ಅಚ್ಚುಮೆಚ್ಚು ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಅಭಿಮಾನಿಗಳು ನೆಚ್ಚಿನ ನಟನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದನ್ನು ನೋಡಿದ್ದೀರಿ. ಆದರೆ ಪುನೀತ್ ಅವರ ಕುಟುಂಬಸ್ಥರೇ ಅಪ್ಪು ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಅಪ್ಪು, ಪುನೀತ್ ,ಪವರ್ ಸ್ಟಾರ್ ಚಿತ್ರವನ್ನು ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಇದೀಗ ರಾಘವೇಂದ್ರ ರಾಜು ಕುಮಾರ್ ಅಪ್ಪು ಹೆಸರು ಮಾತ್ರವಲ್ಲದೆ ಅವರ ಇಬ್ಬರು ಹಣ್ಣುಮಕ್ಕಳ ಹೆಸರನ್ನು ಟ್ಯೂಟ್ ಹಾಕಿಸಿಕೊಂಡಿದ್ದಾರೆ.
ರಾಘಣ್ಣ ಎದೆಯ ಮೇಲೆ ಅಪ್ಪು, ಟೊಟೊ ಮತ್ತು ನುಕ್ಕಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಪವರ್ ಸ್ಟಾರ್ ದೊಡ್ಡ ಮಗಳು ವಂದಿತಾ ಅವರನ್ನು ಪ್ರೀತಿಯಿಂದ ಟೊಟೊ ಎಂದು ಕರೆಯುತ್ತಾರೆ. ಎರಡನೇ ಮಗಳು ಧೃತಿ ಅವರನ್ನು ನುಕ್ಕಿ ಎಂದು ಕರೆಯುತ್ತಾರೆ. ನಿಕ್ ನೇಮ್ ಅನ್ನೇ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ ರಾಘವೇಂದ್ರ ರಾಜ್ ಕುಮಾರ್.