ನ್ಯೂಸ್

ಮದುವೆಯಾದ ಒಂದೇ ವರ್ಷಕ್ಕೆ ಕಣ್ಣು ಕಳೆದುಕೊಂಡ್ರಾ ರಾಘವ್​ ಚಡ್ಡಾ?; ವಿದೇಶದಲ್ಲಿ ಶಸ್ತ್ರಚಿಕಿತ್ಸೆ

ನವದೆಹಲಿ: 2023 ಸೆಪ್ಟೆಂಬರ್​ 24ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಹಾಗೂ ಎಎಪಿ ರಾಜ್ಯಸಭೆ ಸದಸ್ಯ ರಾಘವ್​ ಚಡ್ಡಾ ಮದುವೆಯಾಗಿ ಇನ್ನೂ ಒಂದು ವರ್ಷ ಕಳೆದಿಲ್ಲ. ಇವರಿಬ್ಬರ ಅನ್ಯೋನ್ಯತೆ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲಾ ರಾಘವ್​ ಚಡ್ಡಾ ಅವರು ತಮ್ಮ ದೃಷ್ಠಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಲಂಡನ್​ನಲ್ಲಿ ವಿಟ್ರೆಕ್ಟಮಿ ಚಿಕಿತ್ಸೆಗೆ ಒಳಗಾಗಿರುವ ಸಂಸದ ರಾಘವ್​ ಚಡ್ಡಾ ತೀವ್ರ ಕಣ್ಣಿನ ನೋವಿನಿಂದ ಬಳಲುತ್ತಿದ್ದು, ಅವರು ದೃಷ್ಠಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಈ ಕುರಿತು ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಸೌರಭ್​ ಭಾರದ್ವಾಜ್​ ಪ್ರತಿಕ್ರಿಯಿಸಿದ್ದಾರೆ.

ರಾಘವ್​ ಚಡ್ಡಾ ಅವರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಅವರು ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ. ಲಂಡನ್​ನಲ್ಲಿ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸಮಸ್ಯೆ ಗಂಭೀರವಾಗಿದ್ದು, ಕಣ್ಣುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಚೇತರಿಸಿಕೊಂಡ ಬಳಿಕ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಸಚಿವ ಸೌರಭ್​ ಭಾರದ್ವಾಜ್​ ತಿಳಿಸಿದ್ದಾರೆ.

ಇತ್ತ ರಾಘವ್​ ಚಡ್ಡಾ ಅವರ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅವರು ಶೀಘ್ರ ಗುಣಮುಖರಾಗಲಿ ಎಂಧು ಹಾರೈಸಿದ್ದಾರೆ. ಇದೀಗ ಪತಿ ಕಣ್ಣಿನ ಸಮಸ್ಯೆ ಪರಿಣಿತಿ ಚೋಪ್ರಾರನ್ನು ಚಿಂತೆಗೀಡು ಮಾಡಿದ್ದು, ಹಲವರು ರಾಘವ್​ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.